Tumakuru Bus Accident: ಬಸ್ ದುರಂತದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ

ಪಾವಗಢ ಬಸ್ ದುರಂತದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ. ಸರ್ಕಾರದಿಂದ 5 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ರೂ ಘೋಷಿಸಿದ್ದಾರೆ ಸಾರಿಗೆ ಸಚಿವ ಶ್ರೀರಾಮುಲು. ಗಾಯಾಳುಗಳಿಗೆ 50 ಸಾವಿರ ರೂ ಘೋಷಿಸಿದ್ದಾರೆ. 

Share this Video
  • FB
  • Linkdin
  • Whatsapp

ತುಮಕೂರು (ಮಾ. 19): ಪಾವಗಢ ಬಸ್ ದುರಂತದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ. ಸರ್ಕಾರದಿಂದ 5 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ರೂ ಘೋಷಿಸಿದ್ದಾರೆ ಸಾರಿಗೆ ಸಚಿವ ಶ್ರೀರಾಮುಲು. ಗಾಯಾಳುಗಳಿಗೆ 50 ಸಾವಿರ ರೂ ಘೋಷಿಸಿದ್ದಾರೆ. ಈ ದುರಂತದಲ್ಲಿ ಯಾರು ತಪ್ಪಿತಸ್ಥರೋ ಅವರ ಮೇಲೆ ಕ್ರಮ ಜರುಗಿಸುತ್ತೇವೆ' ಎಂದು ಶ್ರೀರಾಮುಲು ಹೇಳಿದ್ದಾರೆ. 

ಪಾವಗಢ ಬಸ್ ದುರಂತದಲ್ಲಿ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈವರೆಗೂ 8 ಮಂದಿಯ ಮೃತರ ಹೆಸರು ಪತ್ತೆಯಾಗಿದೆ. ಮೃತರಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಅತೀ ವೇಗದ ಚಾಲನೆ, ಓವರ್‌ಲೋಡ್ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. 

Related Video