Asianet Suvarna News Asianet Suvarna News

ಹಾವಿನಿಂದ ಮಗನನ್ನು ಕಾಪಾಡಿದ ತಾಯಿ, ವಿಡಿಯೋ ವೈರಲ್!

ಇನ್ನೇನು ಮಗು ಹಾವಿನ ಮೇಲೆ ಕಾಲಿಡಬೇಕು ಎನ್ನುವ ಹಂತದಲ್ಲಿ ಸಮಯಪ್ರಜ್ಞೆ ಮರೆದ ತಾಯಿ, ಮಗುವನ್ನು ಪವಾಡಸದೃಶ್ಯವಾಗಿ ಪಾರು ಮಾಡಿದ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿದೆ. ಮಂಡ್ಯದಲ್ಲಿ ವೈದ್ಯನಾಥಪುರಕ್ಕೆ ತೆರಳುವ ಕೆಮ್ಮಣ್ಣು ಕಾಲುವೆ ರಸ್ತೆಯ ಬಡವಾಣೆಯಲ್ಲಿ ನಡೆದ ಘಟನೆ ಇದಾಗಿದೆ.
 

Aug 13, 2022, 3:25 PM IST

ಮಂಡ್ಯ (ಆ. 13): ತನ್ನ ಸಮಯಪ್ರಜ್ಞೆಯಿಂದ ಹಾವು ಕಡಿತದಿಂದ ಮಗನನ್ನು ಕಾಪಾಡುವಲ್ಲಿ ತಾಯಿ ಯಶಸ್ವಿಯಾಗಿದ್ದಾಳೆ. ತಾಯಿ ಸಮಯಪ್ರಜ್ಞೆಗೆ ಅಪಾಯದಿಂದ ಪಾರಾದ ಮಗು. ಎದೆ ಝಲ್ಲೆನಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ. ಮನೆಯಿಂದ ತಾಯಿ ಮಗ ಹೊರಬರುವ ವೇಳೆ ಈ ಘಟನೆ ನಡೆದಿದೆ. ಹೊರ ಬರ್ತಿದ್ದಂತೆ ಮನೆ ಮುಂಭಾಗ ಇದ್ದ ಹಾವಿನ ಬಳಿ ಹೆಜ್ಜೆ ಇಟ್ಟ ಬಾಲಕ. ಹಾವನ್ನು ಕಂಡು ಚೀರಾಡುತ್ತ ಮಗು ಬಳಿ ತಾಯಿ ಓಡಿ ಬಂದಿದ್ದಾರೆ.

ಇನ್ನೇನು ಹೆಡೆ ಎತ್ತಿ ಕಚ್ಚಲು ಬರುವ ಹಾವಿನಿಂದ ಕಾಪಾಡುವಲ್ಲಿ ತಾಯಿ ಯಶಸ್ವಿಯಾಗಿದ್ದಾಳೆ. ಕ್ಷಣಮಾತ್ರದಲ್ಲಿ ಹಾವಿನಿಂದ ಮಗು ಪಾರಾಗಿದೆ. ಇಲ್ಲಿನವೈದ್ಯನಾಥಪುರಕ್ಕೆ ತೆರಳುವ ಕೆಮ್ಮಣ್ಣು ಕಾಲುವೆ ರಸ್ತೆಯ ಬಡವಾಣೆಯಲ್ಲಿ ಘಟನೆ ಎಂದು ಹೇಳಲಾಗಿದ್ದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ಈ ಘಟನೆ ನಡೆದಿದೆ.

ನಾಗರ ಪಂಚಮಿಯ ಮರುದಿನವೇ ಸರ್ಪ ಸೇಡಿಗೆ ಬಲಿಯಾದ ಸಹೋದರರು!

ಘಟನೆಯಿಂದ ನಮಗೆಲ್ಲ ಭಯವಾಗಿತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗಲಿಲ್ಲ. ಈ ಘಟನೆ ನಡೆದಿದ್ದು ನಮ್ಮ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಮನೆಯಲ್ಲಿ. ನನ್ನ ಪತ್ನಿ ಪ್ರಿಯಾ ನನ್ನ ಮಗನನ್ನ ಕಾಪಾಡಿದ್ದಾರೆ. ಘಟನೆಯಿಂದ ನನ್ನ ಪತ್ನಿಗೆ ತುಂಬ ಭಯವಾಗಿತ್ತು. ದೇವರ ದಯೆಯಿಂದ ನನ್ನ ಮಗು ಬದುಕಿದೆ. ದೇವರ ಹಾವು ಆಗಿರುವ ಕಾರಣಕ್ಕೆ ಏನು ಮಾಡಿಲ್ಲ ಎಂದು ಮಗು ತಂದೆ ವಿಷ್ಣು ಪ್ರಸಾದ್ ಹೇಳಿಕೆ ನೀಡಿದ್ದಾರೆ.