ಸಿಎಂ ಬಿಎಸ್ ಯಡಿಯೂರಪ್ಪಗೆ ತಿರುಗೇಟು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್
ಸಿಎಂ ಮಾಧ್ಯಮ ಪ್ರಕಟಣೆಗೆ ಚಂದ್ರಶೇಖರ್ ತಿರುಗೇಟು ಕೊಟ್ಟಿದ್ದು ಸಾರಿಗೆ ಸಿಬ್ಬಂದಿ ಎತ್ತಿಕಟ್ಟುವುದು ಅಂದ್ರೇನು? ಎಂದು ಸಿಎಂಗೆ ನೇರ ಪ್ರಶ್ನೆ ಹಾಕಿದ್ದಾರೆ.
ಬೆಂಗಳೂರು, (ಡಿ.12): ಸಾರಿಗೆ ನೌಕರರ ಹೋರಾಟದ ಗೌರವಾಧ್ಯಕ್ಷರಾಗಿ ಕೋಡಿಹಳ್ಳಿ ಚಂದ್ರಶೇಖರ್ರನ್ನು ಆಯ್ಕೆ ಮಾಡಲಾಗಿದೆ. ಕೋಡಿಹಳ್ಳಿ ಚಂದ್ರಶೇಖರ್‌ರನ್ನ ನೌಕರರು ಆಯ್ಕೆ ಮಾಡಿದ್ದಾರೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್‌ರನ್ನ ಆಯ್ಕೆ ಮಾಡಿದ್ದಾರೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿಎಂ ಯಡಿಯೂರಪ್ಪ ಕೆಂಡಾಮಂಡಲ
ಈ ನಡುವೆ, ಸಿಎಂ ಮಾಧ್ಯಮ ಪ್ರಕಟಣೆಗೆ ಚಂದ್ರಶೇಖರ್ ತಿರುಗೇಟು ಕೊಟ್ಟಿದ್ದು ಸಾರಿಗೆ ಸಿಬ್ಬಂದಿ ಎತ್ತಿಕಟ್ಟುವುದು ಅಂದ್ರೇನು? ಎಂದು ಸಿಎಂಗೆ ನೇರ ಪ್ರಶ್ನೆ ಹಾಕಿದ್ದಾರೆ.