Asianet Suvarna News Asianet Suvarna News

ಮಾಸ್ಕ್‌ ತಂದ ತಲೆನೋವು, ಹೆಚ್ಚುತ್ತಿದೆ ಮೊಡವೆ, ಗುಳ್ಳೆಗಳು, ಹೆಂಗಳೆಯರು ಕಂಗಾಲು..!

ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುತ್ತೇವೆ. ಹೊರಗಡೆ ಹೋಗುವಾಗ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿದೆ. ಇದೇ ಮಾಸ್ಕ್‌ನಿಂದ ಹೊಸ ಚರ್ಮ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ.

ಬೆಂಗಳೂರು (ಫೆ. 13): ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುತ್ತೇವೆ. ಹೊರಗಡೆ ಹೋಗುವಾಗ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿದೆ. ಇದೇ ಮಾಸ್ಕ್‌ನಿಂದ ಹೊಸ ಚರ್ಮ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಮುಖದ ಮೇಲೆ ‘ಮಾಸ್ಕ್ ಆಕ್ನೆ’ ಎಂಬ ಮೊಡವೆಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ಮಾಸ್ಕ್ ಧರಿಸುವ ವೇಳೆ ಸೂಕ್ತ ಮುನ್ನೆಚ್ಚರಿಕೆ ಪಾಲಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

'ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ, ಸಿಎಂ ಕುರ್ಚಿಯದ್ದೇ ಜಪ ಮಾಡ್ತಾರೆ'

ಮಾಸ್ಕ್ ಹಾಕಿದಾಗ ಉಸಿರಾಡಲು ಹೊರಗಡೆಯಿಂದ ಸುಲಭವಾಗಿ ಗಾಳಿ ಬರುವುದಿಲ್ಲ. ಹೀಗಾಗಿ ಹೆಚ್ಚಾಗಿ ಬೆವರು ಹೊರಹೊಮ್ಮುತ್ತದೆ. ಜೊತೆಗೆ ಮಾಸ್ಕ್ ಆ ಭಾಗದಲ್ಲಿ ಉಜ್ಜುವುದರಿಂದ ಹಾಗೂ ಮಾಸ್ಕ್ ಸ್ವಚ್ಛತೆಯಿಂದ ಕೂಡಿರದಿದ್ದರೆ ಮೊಡವೆಗಳು ಉಂಟಾಗುತ್ತವೆ. ಹಾಗಾಗಿ ಮಾಸ್ಕ್ ಧರಿಸುವಾಗ ಕೆಲವೊಂದು ಟಿಪ್ಸ್‌ಗಳನ್ನು ಅನುಸರಿಸುವುದು ಉತ್ತಮ ಎಂದು ತಜ್ಷರು ಸಲಹೆ ನೀಡಿದ್ಧಾರೆ. 
 

Video Top Stories