ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು; ಶಹಬ್ಭಾಸ್ ಶಾಸಕರೇ..!
ಬೆಂಗಳೂರಿನ ಪಾಲಿಗೆ ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು. ಕುಟುಂಬದವರು ಬರದಿದ್ರೆ ಇವರೇ ಸಂಬಂಧಿಕರಾಗುತ್ತಾರೆ. ಎಷ್ಟೋ ಅನಾಥ ಶವಗಳಿಗೆ ಮುಕ್ತಿ ನೀಡಿದ್ದಾರೆ. ಮೃತ ವ್ಯಕ್ತಿಯ ಧರ್ಮ, ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತಾರೆ. ಇದುವರೆಗೂ 100 ಕ್ಕೂ ಹೆಚ್ಚು ಅಂತ್ಯಸಂಸ್ಕಾರ ಮಾಡಿದೆ ಈ ತಂಡ. ಜಾತಿ, ಧರ್ಮವನ್ನು ಮೀರಿ ಮಾನವೀಯತೆಯನ್ನು ಸಾರಿದ್ದಾರೆ.
ಬೆಂಗಳೂರು (ಜು. 07): ಬೆಂಗಳೂರಿನ ಪಾಲಿಗೆ ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು. ಕುಟುಂಬದವರು ಬರದಿದ್ರೆ ಇವರೇ ಸಂಬಂಧಿಕರಾಗುತ್ತಾರೆ. ಎಷ್ಟೋ ಅನಾಥ ಶವಗಳಿಗೆ ಮುಕ್ತಿ ನೀಡಿದ್ದಾರೆ. ಮೃತ ವ್ಯಕ್ತಿಯ ಧರ್ಮ, ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತಾರೆ. ಇದುವರೆಗೂ 100 ಕ್ಕೂ ಹೆಚ್ಚು ಅಂತ್ಯಸಂಸ್ಕಾರ ಮಾಡಿದೆ ಈ ತಂಡ. ಜಾತಿ, ಧರ್ಮವನ್ನು ಮೀರಿ ಮಾನವೀಯತೆಯನ್ನು ಸಾರಿದ್ದಾರೆ.
ಬೆಂಗಳೂರಿಗರೇ ಈ ಗ್ರಾಮಗಳಿಗೆ ನಿಮಗೆ ಪ್ರವೇಶವಿಲ್ಲ..!
ಶಾಸಕ ಜಮೀರ್ ಅಹ್ಮದ್ ನಿಯೋಜಿಸಿರುವ ತಂಡ ಇದು. ಈ ತಂಡದಲ್ಲಿ ಹಿಂದೂ, ಮುಸ್ತಲೀಂ ಹಾಗೂ ಕ್ರೈಸ್ತ ಧರ್ಮದವರಿದ್ದಾರೆ. ಎಲ್ಲಿಯೂ ಪ್ರಚಾರ ಬಯಸದೇ, ತಮ್ಮ ಕೆಲಸವನ್ನು ಮಾಡುತ್ತಿದೆ. ಕೊರೊನಾದಿಂದ ಮೃತಪಟ್ಟವರನ್ನು ಅವರ ಕುಟುಂಬದವರೇ ನೋಡಲು ಬರುತ್ತಿಲ್ಲ. ಶವಗಳು ಅನಾಥವಾಗುತ್ತಿವೆ. ಇಂತವರಿಗೆ ಇವರೇ ಮುಕ್ತಿಯನ್ನು ನೀಡುತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ ಅವರ ಈ ಕೆಲಸಕ್ಕೆ, ಹಾಗೂ ಈ ತಂಡದ ಸದಸ್ಯರ ಕೆಲಸಕ್ಕೆ ನಮ್ಮದೊಂದು ಸಲಾಂ..!