Asianet Suvarna News Asianet Suvarna News

ಮಾಜಿ ಡಿಸಿಎಂ ಪರಮೇಶ್ವರ್ ಐಟಿ ಬಲೆಗೆ ಬಿದ್ದಿದ್ದು ಹೇಗೆ? ಬೇಟೆ ಹಿಂದಿನ ಅಸಲಿ ಸೀಕ್ರೆಟ್!

ಮಾಜಿ ಡಿಸಿಎಂ ಪರಮೇಶ್ವರ್‌ಗೆ ಐಟಿ ಶಾಕ್| ಡಿಕೆಶಿ ಆಯ್ತು, ಈಗ ಪರಮೇಶ್ವರ್ ಸರದಿ| ಪರಮೆಶ್ವರ್ ಒಡೆತತನದ ಸಂಸ್ಥೆಗಳ ಮೇಲೆ ದಾಳಿ ನಡೆದಿದ್ದೇಕೆ? ಇಲ್ಲಿದೆ ಕಾರಣ

ಬೆಂಗಳೂರು[ಅ.10]: ಒಂದೆಡೆ ಐಟಿ ದಾಳಿ ಬಳಿಕ ಇಡಿ ಕುಣಿಕೆಗೆ ಸಿಲುಕಿರುವ ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದಾರೆ. ಃಇಗಿರುವಾಗ ಇತ್ತ ರಾಜ್ಯದ ಮಾಜಿ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಿವಾಸ ಹಾಗೂ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿದೆ. ಅಷ್ಟಕ್ಕೂ ಈ ದಾಳಿ ಏಕಾಏಕಿ ನಡೆದಿದ್ದು ಯಾಕೆ?

ಹೌದು ಇಂದು ಗುರುವಾರ ಬೆಳ್ಳಂ ಬೆಳಗ್ಗೆ ಮಾಜಿ ಡಿಸಿಎಂ ಪರಮೇಶ್ವರ್ ನಿವಾಸಗಳ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ನಡೆಸಿರುವ ದಾಳಿ ಸದ್ಯ ದೇಶದಾದ್ಯಂತ ಸೌಂಡ್ ಮಾಡುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪರಮೇಶ್ವರ್ ಐಟಿ ದಾಳಿ ನಡೆದರೆ ಸಂತೋಷ, ತಪ್ಪು ಮಾಡಿದರೆ ಸಂತೋಷ. ನಮ್ಮಲ್ಲಿ ತಪ್ಪುಗಳಿದ್ದರೆ ದಾಳಿ ನಡೆಸಲಿ ಎಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಮಾಜಿ ಡಿಸಿಎಂ ಪರಮೇಶ್ವರ್ ಸಂಪತ್ತಿನ ಮೇಲೇ ಯಾಕೆ ಐಟಿ ದಾಳಿ ನಡೆಯಿತು? ಇದಕ್ಕೇನು ಕಾರಣ? ಎಂಬ ಪ್ರಶ್ನೆ ಭಾರೀ ಕುತೂಹಲ ಮೂಡಿಸುವಂತಹುದ್ದು. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ

ಐಟಿ ದಾಳಿಗೆ ಪರಮೇಶ್ವರ್ ರಿಯಾಕ್ಷನ್ ಏನು? ಇಲ್ಲಿ ಕ್ಲಿಕ್ಕಿಸಿ