Mekedatu Padayatre: ಬೆಂಗಳೂರಲ್ಲಿ 3 ದಿನ ಪಾದಯಾತ್ರೆ ಹಿಂದೆ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್

ರಾಮ​ನ​ಗರ (Ramanagar) ಕ್ಷೇತ್ರ​ದಲ್ಲಿ 2ನೇ ಹಂತದ ಮೇಕೆ​ದಾಟು ಪಾದ​ಯಾತ್ರೆ (Mekedatu Padayatre) ಮೂಲಕ ಕಾಂಗ್ರೆಸ್‌ನ ಶಕ್ತಿ ಪ್ರದ​ರ್ಶನ ಮಾಡಿದೆ.  ‘ನಮ್ಮ ನೀರು ನಮ್ಮ ಹಕ್ಕು’, ‘ನಮ್ಮ ಹಕ್ಕಿಗಾಗಿ ಕಟ್ಟಲೇಬೇಕು ಅಣೆಕಟ್ಟು’ ಎಂಬ ಉತ್ಸಾಹ ತುಂಬುವ ಮೇಕೆದಾಟು ಧ್ಯೇಯಗೀತೆಗಳೊಂದಿಗೆ ಮೊದಲ ದಿನ ಯಶಸ್ವಿಯಾಗಿ ಹದಿನೈದು ಕಿ.ಮೀ. ಪಾದಯಾತ್ರೆ ಪೂರ್ಣಗೊಳಿಸಲಾಯಿತು

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 28): ರಾಮ​ನ​ಗರ (Ramanagar) ಕ್ಷೇತ್ರ​ದಲ್ಲಿ 2ನೇ ಹಂತದ ಮೇಕೆ​ದಾಟು ಪಾದ​ಯಾತ್ರೆ (Mekedatu Padayatre) ಮೂಲಕ ಕಾಂಗ್ರೆಸ್‌ನ ಶಕ್ತಿ ಪ್ರದ​ರ್ಶನ ಮಾಡಿದೆ. ‘ನಮ್ಮ ನೀರು ನಮ್ಮ ಹಕ್ಕು’, ‘ನಮ್ಮ ಹಕ್ಕಿಗಾಗಿ ಕಟ್ಟಲೇಬೇಕು ಅಣೆಕಟ್ಟು’ ಎಂಬ ಉತ್ಸಾಹ ತುಂಬುವ ಮೇಕೆದಾಟು ಧ್ಯೇಯಗೀತೆಗಳೊಂದಿಗೆ ಮೊದಲ ದಿನ ಯಶಸ್ವಿಯಾಗಿ ಹದಿನೈದು ಕಿ.ಮೀ. ಪಾದಯಾತ್ರೆ ಪೂರ್ಣಗೊಳಿಸಲಾಯಿತು.

Mekedatu Padayatra ಮೇಕೆದಾಟು ಮಹಾಕಾಳಗ, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಭಾಗಿ

ಕಳೆದ ಜ.9ರಂದು ಮೇಕೆದಾಟು ಸಂಗಮದಿಂದ ಶುರುವಾಗಿದ್ದ ಪಾದಯಾತ್ರೆ ಹೈಕೋರ್ಟ್‌ ಮಧ್ಯಪ್ರವೇಶದಿಂದ ಜ.12ಕ್ಕೆ ರಾಮನಗರದಲ್ಲಿ ಅರ್ಧಕ್ಕೇ ಮೊಟಕುಗೊಂಡಿತ್ತು. ಅಂದು ಕಾಂಗ್ರೆಸ್‌ ನಾಯಕರು ಮಾಡಿದ್ದ ಘೋಷಣೆಯಂತೆ ಫೆ. 27 ರಿಂದ ಪಾದಯಾತ್ರೆ ನಿಂತಿದ್ದ ಸ್ಥಳದಿಂದಲೇ ಪುನಾರಂಭಗೊಂಡಿದ್ದು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ 79.8 ಕಿ.ಮೀ. ಉದ್ದದ ಐದು ದಿನಗಳ ಪಾದಯಾತ್ರೆಗೆ ಚಾಲನೆ ನೀಡಿದರು. ಕಾಂಗ್ರೆಸ್‌ನ ಈ ಪಾದಯಾತ್ರೆಗೆ ಬಿಜೆಪಿ ನಾಯಕರಿಂದ ಟೀಕೆ ವ್ಯಕ್ತವಾಗಿದೆ. ಮೊದಲ ದಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. 

Related Video