ದೇವರ ಮೇಲೆ ಬೆಳೆಯುತ್ತೆ ಹುತ್ತ: ಈ ಪವಾಡ ನಿಜಕ್ಕೂ ನಿಗೂಢ
ಕಡೂರಿನ ಒಂದು ದೇವಸ್ಥಾನದಲ್ಲಿ ನಡೆಯುವ ಚಮತ್ಕಾರ ಎಂತಹವರನ್ನೂ ಬೆಚ್ಚಿ ಬೀಳಿಸುತ್ತೆ. ಇಲ್ಲಿ ನಡೆಯೋ ಪವಾಡಗಳಿಗೆ ಜನ ಹುಬ್ಬೇರಿಸುತ್ತಾರೆ. ವಿಜ್ಞಾನಕ್ಕೂ ಸವಾಲು ಹಾಕಿದಂತಿರೋ ಪವಾಡಗಳು ದೇವಿಯ ಮಹಿಮೆಯನ್ನು ಸಾರುತ್ತಿದೆ.
ಕಡೂರಿನ ಕಂದೂರು ಗ್ರಾಮದಲ್ಲಿ ಅಪರೂಪದ ದೇಗುಲವಿದೆ. ಈ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದ್ದು, ದೂರದೂರುಗಳಿಂದ ಜನ ಇಲ್ಲಿಗೆ ಬಂದು, ಹುತ್ತದ ಕೆಂಪಮ್ಮನ ದರ್ಶನ ಪಡೆದು ಪುನೀತರಾಗ್ತಾರೆ. ಶತಮಾನಗಳಿಂದಲೂ ಇಲ್ಲಿ ದೇವರ ಮೇಲೆ ಹುತ್ತ ಬೆಳೆಯುತ್ತಿದೆ. ಇಡೀ ದೇವಸ್ಥಾನವೇ ಕಲ್ಲಿನಿಂದ ರೂಪುಗೊಂಡಿದೆ. ಗರ್ಭಗುಡಿಯಲ್ಲಿ ಟೈಲ್ಸ್ ಹಾಕಲಾಗಿದೆ. ಆದ್ರೂ ಇಲ್ಲಿ ವಿಚಿತ್ರ ಅಂದರೆ ಹುತ್ತ ಬೆಳೆಯುತ್ತೆ. 5 ವರ್ಷಕ್ಕೊಮ್ಮೆ ಈ ಚಮತ್ಕಾರ ನಡೆಯುತ್ತಿದ್ದು, ಹುತ್ತದ ಕೆಂಪಮ್ಮ ಒಂದು ಪುಟ್ಟ ದೇವಸ್ಥಾನವಾದ್ರೂ ಕೂಡ 5 ಗ್ರಾಮಗಳಿಗೆ ಗ್ರಾಮ ದೇವತೆ ಅನ್ನೋದೇ ವಿಶೇಷ.