ರಾಜ್ಯದ 3 ಕಡೆ ಟೆಲಿ ಮೆಡಿಸಿನ್ ಕೇರ್ ಸಹಾಯವಾಣಿ ಸ್ಥಾಪಿಸಲು ಮುಂದಾದ ಸರ್ಕಾರ

ಕೊರೋನಾ ಟೆಲಿ ಮೆಡಿಸಿನ್ ಕೇರ್ ಡೆಸ್ಕ್ ಬೆಳಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆವರೆಗೆ ಕೆಲಸ ನಿರ್ವಹಿಸಲಿದೆ. ದಿನದ 12 ಗಂಟೆ 2 ಶಿಫ್ಟ್ ಮೂಲಕ ಸಾರ್ವಜನಿಕರಿಗೆ ಸೇವೆ ನೀಡಲಿದೆ. ಜನರು ಹಂಚಿಕೊಂಡ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.   

First Published Apr 22, 2020, 12:31 PM IST | Last Updated Apr 22, 2020, 12:31 PM IST

ಬೆಂಗಳೂರು(ಏ.22) ಕೊರೋನಾ ವೈರಸ್ ಸೇರಿ ಹಲವು ಅನಾರೋಗ್ಯ ಕುರಿತು ಸಾರ್ವಜನಿಕರಿಗೆ ವೈದ್ಯಕೀಯ ನೆರವು ನೀಡಲು ಕರ್ನಾಟಕ ಸರ್ಕಾರ ಟೆಲಿ ಮೆಡಿಸಿನ್ ಕೇರ್ ಡೆಸ್ಕನ್ನು ಮಂಗಳೂರು, ಮೈಸೂರು ಹಾಗೂ ಬೆಂಗಳೂರಿನಲ್ಲಿ ಸ್ಥಾಪಿಸುತ್ತಿದೆ. 

ಕೊರೋನಾ ಟೆಲಿ ಮೆಡಿಸಿನ್ ಕೇರ್ ಡೆಸ್ಕ್ ಬೆಳಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆವರೆಗೆ ಕೆಲಸ ನಿರ್ವಹಿಸಲಿದೆ. ದಿನದ 12 ಗಂಟೆ 2 ಶಿಫ್ಟ್ ಮೂಲಕ ಸಾರ್ವಜನಿಕರಿಗೆ ಸೇವೆ ನೀಡಲಿದೆ. ಜನರು ಹಂಚಿಕೊಂಡ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.   

ಕೊರೋನಾ ಸೋಂಕಿತರಿಗೆ ಟೆಲಿ ಐಸಿಯು ಸ್ಥಾಪನೆ; ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಇಲ್ಲಿದೆ ನೋಡಿ!

ಕೊರೋನಾ ವೈರಸ್‌ನಿಂದ ಮಾನಸಿಕವಾಗಿ ಕಂಗೆಟ್ಟವರು ಹಾಗೂ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ಈ ಡೆಸ್ಕ್ ಅಗತ್ಯ ನೆರವು ನೀಡಲಿದೆ. ಅಷ್ಟಕ್ಕೂ ಇದೇ ಹೇಗೆ ಕಾರ್ಯನಿರ್ವಹಿಸಲಿದೆ? ನೋಡಿ..