ಸುವರ್ಣ ನ್ಯೂಸ್‌ನ ಜಯಪ್ರಕಾಶ್ ಶೆಟ್ಟಿಯವರಿಗೆ ಪುನೀತ್ ಪ್ರಶಸ್ತಿಯ ಗರಿ

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಬಿಬಿಎಂಪಿ ನೌಕರರ ಕನ್ನಡ ಸಂಘ, ಪುನೀತ್ ಅವರ ಪುತ್ಥಳಿ ಅನಾವರಣಗೊಳಿಸಿದೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. 

First Published Mar 28, 2022, 12:52 PM IST | Last Updated Mar 28, 2022, 12:58 PM IST

ಬೆಂಗಳೂರು (ಮಾ. 28): ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಸ್ಮರಣಾರ್ಥ ಬಿಬಿಎಂಪಿ (BBMP) ನೌಕರರ ಕನ್ನಡ ಸಂಘ, ಪುನೀತ್ ಅವರ ಪುತ್ಥಳಿ ಅನಾವರಣಗೊಳಿಸಿದೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಏಷ್ಯಾನೆಟ್ ಸುವರ್ಣ ನ್ಯೂಸ್‌ ಪ್ರಚಲಿತ ವಿದ್ಯಮಾನ ಸಂಪಾದಕ ಜಯಪ್ರಕಾಶ್‌ ಶೆಟ್ಟಿ ಉಪ್ಪಳ (Jai Prakash Shetty) ಅವರಿಗೆ ಪುನೀತ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಮಾಜಿ ಸಚಿವೆ ಸಾಹಿತಿ ಬಿ.ಟಿ ಲಲಿತಾ ನಾಯಕ್‌, ಹಿರಿಯ ನಿರ್ದೇಶಕ ಎಸ್‌.ಕೆ.ಭಗವಾನ್‌, ನಟ ಹೊನ್ನವಳ್ಳಿ ಕೃಷ್ಣ,  ನೇತ್ರತಜ್ಞ ರಂಗಸ್ವಾಮಿ, ಸಿಸಿಬಿ ಅಧಿಕಾರಿ ಎಸ್‌.ಎಚ್‌.ಪರಮೇಶ್ವರ್‌, ಹಿರಿಯ ಪತ್ರಕರ್ತ ಆರ್‌.ಪಿ.ಜಗದೀಶ್‌, ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿರುವ ರಮ್ಯ ವಶಿಷ್ಠ, ಟಿವಿ9 ವಾಹಿನಿಯ ರಂಗನಾಥ ಭಾರಧ್ವಾಜ, ಸಾಹಿತಿ ಮರಳಸಿದ್ದಪ್ಪ ಅವರಿಗೆ ಡಾ.ಪುನೀತ್‌ ರಾಜಕುಮಾರ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

Video Top Stories