Religious Conversion: ಮತಾಂತರದ ಸುಳಿಯಲ್ಲಿ ಸಿಕ್ಕ ಯುವಕನ ಕಣ್ಣೀರ ಕಥೆ!

ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಸೂಪರ್ ಎಕ್ಸ್‌ಕ್ಲೂಸಿವ್ ಸುದ್ದಿ. ಇಸ್ಲಾಂಗೆ ಮತಾಂತರದ ಕರಾಳ ದಂಧೆಯ ಇಂಚಿಂಚು ಮಾಹಿತಿ, ಮತಾಂತರದ ಸುಳಿಯಲ್ಲಿ ಸಿಕ್ಕ ಯುವಕ ಸುವರ್ಣನ್ಯೂಸ್‌ನಲ್ಲಿ. 

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಅ.12): ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಸೂಪರ್ ಎಕ್ಸ್‌ಕ್ಲೂಸಿವ್ ಸುದ್ದಿ. ಇಸ್ಲಾಂಗೆ ಮತಾಂತರದ ಕರಾಳ ದಂಧೆಯ ಇಂಚಿಂಚು ಮಾಹಿತಿ, ಮತಾಂತರದ ಸುಳಿಯಲ್ಲಿ ಸಿಕ್ಕ ಯುವಕ ಸುವರ್ಣನ್ಯೂಸ್‌ನಲ್ಲಿ. ಹೌದು! ಮಂಡ್ಯ ಮೂಲದ ಯುವಕನಿಗೆ ಮಂಕು ಬೂದಿ ಎರಚಿ, ಮತ್ತುಬರೋ ಪಾನಿಯ ನೀಡಿ ಮತಾಂತರದ ಬಲೆಗೆ ಕಿರತಾಕರು ಕೆಡವಿದ್ದು, ಬಲವಂತದ ಮತಾಂತರ ಬಗ್ಗೆ ಎಳೆಎಳೆಯಾಗಿ ಮಂಡ್ಯದ ಶ್ರೀಧರ್ ಬಿಚ್ಚಿಟ್ಟಿದ್ದಾರೆ. ಕಿರಾತರಕರ ಕಬ್ಜೆಯಲ್ಲಿದ್ದಾಗ ಸ್ವಯಂ ಪ್ರೇರಿತ ಮತಾಂತರ ಎಂದಿದ್ದ ಶ್ರೀಧರ್, ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ತನಗಾದ ಕಿರುಕುಳದ ಬಗ್ಗೆ ದೂರು ನೀಡಿದ್ದು, ಇದೀಗ ಸುವರ್ಣ ನ್ಯೂಸ್ ಮುಂದೆ ತನಗಾದ ಕಿರುಕುಳವನ್ನ ಶ್ರೀಧರ್ ಹೇಳಿಕೊಂಡಿದ್ದಾರೆ. ಇನ್ನು ಮತಾಂತರ ಗ್ಯಾಂಗ್ ವಿರುದ್ಧ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಗೆ ಶ್ರೀಧರ್ ದೂರು ನೀಡಿದ್ದು, ದೂರು ನೀಡಿದ ನಂತರ ಒಬ್ಬೊಬ್ಬರನ್ನೇ ಹುಡುಕಿ ಪೊಲೀಸರು ಎಡೆಮುರಿಕಟ್ಟುತ್ತಿದ್ದಾರೆ. ಈ ಪ್ರಕರಣದ ಸಂಪೂರ್ಣ ಚಿತ್ರಣವನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.

Related Video