ಕೊರೋನಾ ಹೋರಾಟಕ್ಕೆ '100 ಕೋಟಿ' ಬಲ ತುಂಬಿದ ಇನ್ಫೋಸಿಸ್ ಸುಧಾ ಮೂರ್ತಿ!

ಇಡೀ ದೇಶವನ್ನು ಹೊಕ್ಕಿ ಬಿಟ್ಟೂ ಬಿಡದೆ ಕಾಡುತ್ತಿರುವ ಈ ರೂಪಾಂತರಿ ವೈರಸ್ ಕಾಟ ತಾರಕಕ್ಕೇರುತ್ತಿದೆ. ಸೋಂಕಿನಿಂದ ಸತ್ತವರ ಮೃತದೇಹ ಸುಡಲು ಕೂಡಾ ಹೆಣಗಾಟ ಶುರುವಾಗಿದೆ. ಗಂಗಾನದಿಯಲ್ಲಿ ನೂರಾರು ಶವಗಳು ತೇಲಿ ಬಂದಿವೆ. 

First Published May 12, 2021, 4:23 PM IST | Last Updated May 12, 2021, 4:23 PM IST

ಇಡೀ ದೇಶವನ್ನು ಹೊಕ್ಕಿ ಬಿಟ್ಟೂ ಬಿಡದೆ ಕಾಡುತ್ತಿರುವ ಈ ರೂಪಾಂತರಿ ವೈರಸ್ ಕಾಟ ತಾರಕಕ್ಕೇರುತ್ತಿದೆ. ಸೋಂಕಿನಿಂದ ಸತ್ತವರ ಮೃತದೇಹ ಸುಡಲು ಕೂಡಾ ಹೆಣಗಾಟ ಶುರುವಾಗಿದೆ. ಗಂಗಾನದಿಯಲ್ಲಿ ನೂರಾರು ಶವಗಳು ತೇಲಿ ಬಂದಿವೆ. 

ಅಲ್ಲದೇ ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಗೆ ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ಇದರ ನಡುವೆಯೇ ಬೆಂಗಳೂರಿನಲ್ಲಿ 20 ಆಕ್ಸಿ ಬಸ್‌ಗಳು ಫೀಲ್ಡ್‌ಗಿಳಿದಿದೆ. ಅತ್ತ ಕೊರೋನಾ ವಿರುದ್ಧದ ಹೋರಾಟಕ್ಕೆ ಇನ್ಫೋಸಿಸ್ ಸುಧಾಮೂರ್ತಿ ಮತ್ತೆ ನೂರು ಕೋಟಿ ಘೋಷಣೆ ಮಾಡಿದ್ದಾರೆ.

ಇಲ್ಲಿದೆ ನೋಡಿ ಕೊರೋನಾ ಕಾಲದಲ್ಲಿ ಸದ್ದು ಮಾಡಿದ ಸುದ್ದಿಗಳ ರೌಂಡಪ್