ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಪೊಲೀಸ್‌ ಬಲೆಗೆ ಬಿದ್ದಿದ್ಹೇಗೆ?

ಪಿಎಸ್‌ಐ ನೇಮಕಾತಿ ಹಗರಣದ ಮಾಸ್ಟರ್‌ಮೈಂಡ್ ಎನ್ನಲಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕಳೆದ 18 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ ದಿವ್ಯಾ ಹಾಗರಗಿ ಬಂಧನಕ್ಕೆ ಒಳಗಾಗಿದ್ದು ಹೇಗೆ ಎನ್ನುವುದರ ರಿಪೋರ್ಟ್
 

Share this Video
  • FB
  • Linkdin
  • Whatsapp

ಬೆಂಗಳೂರು (ಏ.30): ಪಿಎಸ್ಐ ನೇಮಕಾತಿ ಹಗರಣ (PSI Recruitment Scam) ಕಿಂಗ್ ಪಿನ್ ಆಗಿದ್ದ ದಿವ್ಯಾ ಹಾಗರಗಿ (Divya Hagaragi) ಕರ್ನಾಟಕ ಪೊಲೀಸ್ ಗೆ (Karnataka Police) ತಲೆನೋವಾಗಿ ಪರಿಣಮಿಸಿದ್ದರು. 18 ದಿನಗಳ ತೀವ್ರ ಶೋಧದ ಬಳಿಕ ಕಾಣೆಯಾಗಿದ್ದ ಬಿಜೆಪಿ ನಾಯಕಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರ ಶೋಧ ಕಾರ್ಯ ನಡೆದಿದ್ದು ಹೇಗೆ ಎನ್ನುವುದರ ರಿಪೋರ್ಟ್.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿದೆ. ಇಷ್ಟು ದಿನ ದಿವ್ಯಾ ಹಾಗರಗಿ ಎಲ್ಲಿದ್ದಳು, ಯಾರ ಆಶ್ರಯದಲ್ಲಿದ್ದಳು, ವಿಚಾರಣೆಯ ವೇಳೆ ಪ್ರಭಾವಿಗಳ ಹೆಸರು ಆಚೆ ಬರುತ್ತಾ ಎನ್ನುವ ಮಾಹಿತಿ ಇನ್ನಷ್ಟೇ ಬರಬೇಕಿದೆ. 

PSI Recruitment Scam: ಕಾಶ್ಮೀರದಲ್ಲೆಲ್ಲ ಹುಡುಕಿ ಕೊನೆಗೆ ಪುಣೆಯಲ್ಲಿ ದಿವ್ಯಾ ಹಾಗರಗಿ ಪತ್ತೆ!

ಅಕ್ರಮ ಬೆಳಕಿಗೆ ಬರುತ್ತಿದ್ದಂತೆ, ಬಂಧನ ಭಯದಲ್ಲಿದ್ದ ದಿವ್ಯಾ ಹಾಗರಗಿ ಪಕ್ಕದ ಮಹಾರಾಷ್ಟ್ರಕ್ಕೆ (maharashtra) ಹಾರಿದ್ದರು. ಇನ್ನೇನು ಬಚಾವ್ ಆದೆ ಎಂದು ನಿಟ್ಟುಸಿರುವ ಬಿಡುವಾಗಲೇ, ಕರ್ನಾಟಕ ಪೊಲೀಸರ ಅವಿರತ ಶ್ರಮಕ್ಕೆ ಫಲ ಸಿಕ್ಕಿತ್ತು. ಪುಣೆಯ ಉದ್ಯಮಿಯೊಬ್ಬರ ಬಳಿ ಆಶ್ರಯದಲ್ಲಿದ್ದ ದಿವ್ಯಾರನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

Related Video