ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
ಚೀನಾದಿಂದ ಸ್ಫೋಟಗೊಂಡಿರುವ HMPV ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಕರ್ನಾಟಕ ಆರೋಗ್ಯ ಸಚಿವಾಲಯ ಸೂಚಿಸಿದೆ. ಪ್ರಮುಖವಾಗಿ ಮಕ್ಕಳ ಪೋಷಕರು ತೀವ್ರ ಮುತುವರ್ಜಿ ವಹಿಸುವಂತೆ ಸೂಚಿಸಿದೆ. ಆರೋಗ್ಯ ಇಲಾಖೆ ಸೂಚನೆ ಏನು?
ಬೆಂಗಳೂರು(ಜ.07) ಕರ್ನಾಟಕದಲ್ಲಿ 2 HMPV ಪ್ರಕರಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಸತತ ಸಭೆ ನಡೆಸುತ್ತಿದೆ. ಇದೀಗ ಭಾರತದಲ್ಲಿನ HMPV ಪ್ರಕರಣ ಸಂಕ್ಯೆ 7ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಕೆಲ ಸೂಚನೆ ನೀಡಿದೆ. ಪ್ರಮುಖವಾಗಿ ಮಕ್ಕಳು, ಹಿರಿಯರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ HMPV ವೈರಸ್ ಬೇಗನೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪೋಷಕರು ಸೇರಿದಂತೆ ರಾಜ್ಯದ ಜನತೆಗೆ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ.