Haveri: ಮೆಡಿಕಲ್ ಕಾಲೇಜಿನಲ್ಲಿ ದೇಹದಾನದ ಪ್ರಕ್ರಿಯೆ ಹೇಗಿರುತ್ತದೆ.? ವೈದ್ಯರಿಂದ ವಿವರಣೆ

ಉಕ್ರೇನ್‌ ಯುದ್ಧದಲ್ಲಿ ಮೃತಪಟ್ಟ ನವೀನ್ ಪಾರ್ಥೀವ ಶರೀರ ಹುಟ್ಟೂರು ಚಳಗೇರಿ ತಲುಪಿದೆ. ಅಂತಿಮ ವಿಧಿ ವಿಧಾನ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ನವೀನ್ ಅಂತಿಮ ದರ್ಶನ ಪಡೆದರು. ಬಳಿಕ ಎಸ್‌ಎಸ್ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುತ್ತದೆ. 

First Published Mar 21, 2022, 2:26 PM IST | Last Updated Mar 21, 2022, 2:26 PM IST

ಹಾವೇರಿ (ಮಾ. 21): ಉಕ್ರೇನ್‌ ಯುದ್ಧದಲ್ಲಿ ಮೃತಪಟ್ಟ ನವೀನ್ ಪಾರ್ಥೀವ ಶರೀರ ಹುಟ್ಟೂರು ಚಳಗೇರಿ ತಲುಪಿದೆ. ಅಂತಿಮ ವಿಧಿ ವಿಧಾನ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ನವೀನ್ ಅಂತಿಮ ದರ್ಶನ ಪಡೆದರು. ಬಳಿಕ ಎಸ್‌ಎಸ್ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುತ್ತದೆ. 

'ನಮ್ಮ ಕಾಲೇಜಿಗೆ ತೆಗೆದುಕೊಂಡು ಹೋಗುವ ಮುನ್ನ ಕೆಲವು ವಿಧೇಯಕಗಳಿಗೆ ಸಹಿ ಮಾಡಿಸುತ್ತೇವೆ. ಕಾಲೇಜಿಗೆ ಬಂದ ಬಳಿಕ ಎಂಬಾಲ್ವಿಂಗ್ ಮಾಡುತ್ತೇವೆ. ದೇಹದಾನ ಮಾಡುವ ಬಗ್ಗೆ ನಾವು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಜನರೂ ಕೂಡಾ ಮುಂದೆ ಬರುತ್ತಿದ್ದಾರೆ' ಎಂದು ಎಸ್‌ಎಸ್‌ ಮೆಡಿಕಲ್ ಕಾಲೇಜಿನ ಡಾ. ವೀರೇಶ್ ಹೇಳಿದ್ದಾರೆ.