ಐಟಿ ಕ್ರಾಂತಿಯ ಹರಿಕಾರ, ದೂರದೃಷ್ಟಿ ಮಾತ್ರ ಅಲ್ಲ, ಅನುಷ್ಠಾನ ಮಾಡಿದ ನೇತಾರ: ಯು.ಟಿ ಖಾದರ್

ಬೆಂಗಳೂರನ್ನು ಐಟಿ ಹಬ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಸ್ ಎಂ ಕೃಷ್ಣ ಅವರಿಗೆ ವಿಧಾನಸಭಾ ಸಭಾಪತಿ ಯುಟಿ ಖಾದರ್ ನುಡಿನಮನ ಸಲ್ಲಿಸಿದ್ದಾರೆ.

First Published Dec 10, 2024, 1:28 PM IST | Last Updated Dec 10, 2024, 1:28 PM IST

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಹಾಗೂ ಮಾಜಿ ಕೇಂದ್ರ ಸಚಿವರಾದ ಎಸ್ ಎಂ ಕೃಷ್ಣ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಶ್ರೀಯುತರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದ್ದಾರೆ.

ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಐಟಿ ಸಿಟಿ ಮಾಡುವಲ್ಲಿ ಎಸ್ ಎಂ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು. ಎಸ್ ಎಂ ಕೃಷ್ಣ ಐಟಿ ಹಬ್ ಮಾಡುವ ದೂರದೃಷ್ಠಿ ಹೊಂದಿರದೇ ಅದನ್ನು ಸಾಕಾರ ಮಾಡಿದ ನೇತಾರ ಎಂದು ವಿಧಾನಸಭಾ ಸಭಾವತಿ ಯು.ಟಿ. ಖಾದರ್ ಬಣ್ಣಿಸಿದ್ದಾರೆ.