Asianet Suvarna News Asianet Suvarna News

ಬಿಜಪಿಗೆ ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲ, ಹರ್ ಘರ್ ತಿರಂಗಾ ದೊಡ್ಡ ನಾಟಕ: ಸಿದ್ದರಾಮಯ್ಯ

ಸಿದ್ದರಾಮೋತ್ಸವ ನೋಡಿ ಬಿಜೆಪಿಗೆ ಭಯ ಬಂದಿದೆ. ಭಯದಲ್ಲಿಯೇ ಇನ್ನೂ ವ್ಯರ್ಥ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ ಅವರಿಗೆ ನಡುಕ ಶುರುವಾಗಿದೆ' ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

Aug 8, 2022, 3:04 PM IST

ಸಿದ್ದರಾಮೋತ್ಸವ ನೋಡಿ ಬಿಜೆಪಿಗೆ ಭಯ ಬಂದಿದೆ. ಭಯದಲ್ಲಿಯೇ ಇನ್ನೂ ವ್ಯರ್ಥ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ ಅವರಿಗೆ ನಡುಕ ಶುರುವಾಗಿದೆ' ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಬಿಜೆಪಿ ಅಮೃತ ಮಹೋತ್ಸವವನ್ನು ರಾಜಕೀಯಕರಣ ಮಾಡುತ್ತಿದೆ. ಹರ್ ಘರ್ ತಿರಂಗಾ ಬಿಜೆಪಿ ಮಾಡುತ್ತಿರುವ ನಾಟಕ. ನಮ್ಮ ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಗೆ ಗೌರವವಿಲ್ಲ. ಸಾವರ್ಕರ್ ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದರು. ರಾಷ್ಟ್ರಧ್ವಜವನ್ನು ಖಾದಿ ಅಥವಾ ರೇಷ್ಮೆಯಲ್ಲಿ ಮಾಡಬೇಕು. ಅದನ್ನು ಬಿಟ್ಟು ಬಿಜೆಪಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಹಾಗಾದರೆ ಆತ್ಮನಿರ್ಭರ ಎಲ್ಲಿ ಯಶಸ್ವಿಯಾಯಿತು..? ಎಂದು ಪ್ರಶ್ನಿಸಿದ್ದಾರೆ.