ಬಿಎಂಟಿಸಿ ಚಾಲಕರ ಹೃದಯಕ್ಕೆ ಕಾದಿದೆ ಆಪತ್ತು: ಜಯದೇವ ವೈದ್ಯರ ಶಾಕಿಂಗ್ ವರದಿ ಬಯಲು

BMTC ಬಸ್ ಓಡಿಸುತ್ತಿರುವ ಚಾಲಕರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಸಂಸ್ಥೆಗಾಗಿ ಹಗಲು-ರಾತ್ರಿ ದುಡಿಯುತ್ತಿರುವ ಬಹತೇಕ ಡ್ರೈವರ್ ಗಳ ಹೃದಯ ಅಪಾಯದಲ್ಲಿಯಂತೆ. ಜಯದೇವ ಆಸ್ಪತ್ರೆ ವೈದ್ಯರ ವರದಿಯಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ.
 

Share this Video
  • FB
  • Linkdin
  • Whatsapp

ಬಸ್‌ಗಳ ಕೊರತೆ, ಓವರ್ ಟೈಂ ಡ್ಯೂಟಿ, ಹಬ್ಬದ ದಿನವೂ ಕೆಲಸ, ಸದಾ ಕಿರಿಕಿರಿ, ಒತ್ತಡ ಇದು ಬಿಎಂಟಿಸಿ ಚಾಲಕರು(BMTC Drivers) ಹಾಗೂ ನಿರ್ವಹಕರ ನಿತ್ಯದ ಗೋಳು. ಶಕ್ತಿ ಯೋಜನೆ (Shakti Scheme) ಜಾರಿಯಾದ ನಂತರ ಈ ಸಮಸ್ಯೆ ದುಪ್ಪಟ್ಟಾಗಿದೆ. ಬಸ್‌ಗಳ ಶಾರ್ಟೇಜ್ ನಡುವೆ ಬಿಎಂಟಿಸಿ ಜನರಿಗಾಗಿ ಇರೋ‌ ಬಸ್ ನಲ್ಲಿಯೇ ಹೆಚ್ಚುವರಿ ಟ್ರಿಪ್ ಮಾಡಿಸ್ತಿದೆ. ಇದು ಚಾಲಕರ ಜೀವಕ್ಕೆ ಆಪತ್ತು ಎದುರಾಗುವ ಆತಂಕ ಮೂಡಿಸಿದೆ. ಬಿಎಂಟಿಸಿ ಚಾಲಕರು ಹೃದ್ರೋಗದ(Heart attack) ಅಪಾಯದಲ್ಲಿದ್ದಾರೆ. ಬಿಎಂಟಿಸಿ ಚಾಲಕರ ಪೈಕಿ ಶೇಕಡ 40-50ರಷ್ಟು ಜನ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಜಯದೇವ ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣೆಯಿಂದ ಬೆಳಕಿಗೆ ಬಂದಿದೆ. ಜಯದೇವ ಆಸ್ಪತ್ರೆಯಲ್ಲಿ ಕಳೆದ 12 ತಿಂಗಳಿನಲ್ಲಿ 8 ಸಾವಿರದ 200 ಬಿಎಂಟಿಸಿ ಚಾಲಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ತಪಾಸಣೆಗೆ ಒಳಗಾದ ಶೇಕಡಾ 40 ರಷ್ಟು ಚಾಲಕರಿಗೆ ಮಧುಹೇಹ ಇರೋದು ಪತ್ತೆಯಾಗಿದೆ. ಇಷ್ಟೇ ಅಲ್ಲಾ ಶೇ. 40 ರಷ್ಟು ಚಾಲಕರಿಗೆ ಅಧಿಕದೊತ್ತಡ, ಶೇ. 62 ರಷ್ಟು ಚಾಲಕರಿಗೆ ಹೈ ಕೊಲೆಸ್ಟಲ್ ಪತ್ತೆಯಾಗಿದೆ. ಭವಿಷ್ಯದಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗೆ ಒಳಗಾಗಲಿದ್ದಾರೆ ಅಂತ ವೈದ್ಯರ ಎಚ್ಚರಿಕೆ ನೀಡಿದ್ದಾರೆ. ಇನ್ನು ನೌಕರರಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಇತ್ತಿಚಿನ‌ ದಿನದಲ್ಲಿ ಹಠಾತ್ ಹೃದಯಘಾತದಿಂದ ಸಾಯುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಇದರಲ್ಲಿ ಬಿಎಂಟಿಸಿ ನೌಕರರೇ ಹೆಚ್ಚಾಗಿರೋದು ಆಘಾತಕಾರಿ ಸಂಗತಿ. ಹೀಗಾಗಿ ಹೃದಯದ ಬಗ್ಗೆ ಕಾಳಜಿ ವಹಿಸೋದು ಅಗತ್ಯ ಅಂತಾರೆ ತಜ್ಞರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ರಾಜಧಾನಿ ಬೆಂಗಳೂರಿಗೆ ಶುರುವಾಯ್ತು ಚಿರತೆ ಕಾಟ! ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತೊಂದು ಪ್ರತ್ಯಕ್ಷ

Related Video