Asianet Suvarna News Asianet Suvarna News

'ಶಿವಮೊಗ್ಗ ಕಲ್ಲು ಕ್ವಾರಿ ಮಾಫಿಯಾ ಹಿಂದಿದ್ದವರ ಹೆಸರನ್ನು ಸಿಎಂ ಎದುರು ಬಾಯ್ಬಿಡುವೆ'

ಶಿವಮೊಗ್ಗದ ಹುನಸೋಡು ಬಳಿ ನಡೆದ ಜಿಲೆಟಿನ್ ಸ್ಫೋಟದ ಬಗ್ಗೆ ಎಂಎಲ್‌ಸಿ ಆಯನೂರು ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ. 
 

ಬೆಂಗಳೂರು (ಜ. 22): ಶಿವಮೊಗ್ಗದ ಹುನಸೋಡು ಬಳಿ ನಡೆದ ಜಿಲೆಟಿನ್ ಸ್ಫೋಟದ ಬಗ್ಗೆ ಎಂಎಲ್‌ಸಿ ಆಯನೂರು ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ. 

ಮಲೆನಾಡಿನಲ್ಲಿ ಮಹಾದುರಂತ, ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

'ಅಕ್ರಮ ಗಣಿಗಾರಿಕೆಗೆ ಎಲ್ಲಾ ಪಕ್ಷಗಳ ಪ್ರಭಾವಿಗಳು ಕುಮ್ಮಕ್ಕು ಇದೆ. ಈ ಮಾಫಿಯಾ ಹಿಂದೆ ಯಾರ್ಯಾರಿದ್ದಾರೆ ಅಂತ ಅಧಿಕಾರಿಗಳಿಗೂ ಗೊತ್ತು. ನನಗೂ ಗೊತ್ತು. ಈಗಲೇ ಹೇಳಿದರೆ ಅವರನ್ನು ಬಚಾವ್ ಮಾಡಿಬಿಡ್ತಾರೆ. ನಾಳೆ ಸಿಎಂ ಅವರನ್ನು ಭೇಟಿ ಮಾಡಿದಾಗ ಅವರ ಗಮನಕ್ಕೆ ತರುತ್ತೇನೆ. ಇಂತಹ ದುರಂತವನ್ನು ಸಿಎಂ ಬಿಎಸ್‌ವೈ ಸಹಿಸೋದಿಲ್ಲ. ಈ ಮಾಫಿಯಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆಂಬ ನಂಬಿಕೆ ಇದೆ' ಎಂದಿದ್ದಾರೆ. 

Video Top Stories