ಶಿರೂರು ಗುಡ್ಡಕುಸಿತ ದುರಂತ: ಮತ್ತೊಂದು ಮೃತದೇಹ ಪತ್ತೆ!

ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 6 ಮೃತದೇಹಗಳು ಪತ್ತೆಯಾಗಿವೆ. ಇಂದು ಅವಂತಿನಾಯ್ಕ ಹಾಗೂ ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಮುರುಗನ್ (45) ಮೃತದೇಹ ಪತ್ತೆಯಾಗಿದೆ.

Share this Video
  • FB
  • Linkdin
  • Whatsapp

ಕಾರವಾರ (ಜು.18): ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 6 ಮೃತದೇಹಗಳು ಪತ್ತೆಯಾಗಿವೆ. ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ, ರೋಶನ್ ನಾಯ್ಕ, ತಮಿಳುನಾಡಿನ ಲಾರಿ ಚಾಲಕ ಚಿನ್ನಣ್ಣ (55) ಮೃತದೇಹ ಮೊನ್ನೆ ಪತ್ತೆಯಾಗಿತ್ತು. ಇಂದು ಅವಂತಿನಾಯ್ಕ ಹಾಗೂ ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಮುರುಗನ್ (45) ಮೃತದೇಹ ಪತ್ತೆಯಾಗಿದೆ. ಇನ್ನು ಕೇರಳ ಮೂಲದ ಟಿಂಬರ್ ಲಾರಿ ಚಾಲಕ ಅರ್ಜುನ್, ಲಾರಿ ಸಹಿತ ನಾಪತ್ತೆಯಾಗಿದ್ದು, ಬೆಂಜ್ ಕಾರೊಂದು ಕೂಡಾ ಮಣ್ಣಿನಡಿ ಸಿಲುಕಿದ್ದ ಮಾಹಿತಿ ದೊರಕಿತ್ತು. ಇನ್ನು ಚಾಲಕ ಅರ್ಜುನ್ ಸಹಿತ ಟಿಂಬರ್ ಲಾರಿ ಹಾಗೂ ಬೆಂಜ್ ಕಾರು ಮಣ್ಣಿನಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಇನ್ನು ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ದುರ್ಘಟನೆಯಲ್ಲಿ ಕಾಣೆಯಾಗಿದ್ದ ಬಾಲಕಿ ಅವಂತಿಕಾ ಮೃತದೇಹ ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಗೋಕರ್ಣದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video