4 ವರ್ಷದ ಪೋರನಿಂದ ಶ್ಯಾಡೋ ಕಲಾಕೃತಿ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಿಕ್ತು ಸ್ಥಾನ!
- ಹ್ಯಾಂಡ್ ಶ್ಯಾಡೋ ಫೊಟೋಗ್ರಫಿಯಲ್ಲಿ ಅದ್ವಿತೀಯ ಸಾಧನೆ
- ತುಮಕೂರಿನ 4 ವರ್ಷದ ಪುಟ್ಟ ಪೋರನ ಸಾಧನೆಗೆ ಮೆಚ್ಚುಗೆ
- ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಿಟ್ಟಿಸಿದ ವಿಲಾಸ್
ತುಮಕೂರು (ನ. 07): ಸಾಧಿಸುವ ಛಲವಿದ್ದರೆ ಮಾರ್ಗಗಳು ಸಾವಿರಾರು, ಕ್ಷೇತ್ರಗಳು ನೂರಾರು. ಕ್ರೀಡೆ, ಸಾಹಿತ್ಯ, ಸಂಶೋಧನೆ, ಶಿಕ್ಷಣ, ಕಲೆ ಹೀಗೇ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಫುಲ ಅವಕಾಶವಿದೆ. ಇಂತಹ ಅಪರೂಪದ ಅವಕಾಶವನ್ನು ಬಳಸಿಕೊಂಡು ತುಮಕೂರು ಮೂಲದ ಪೋರನೊಬ್ಬ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನಗಿಟ್ಟಿಸಿದ್ದಾನೆ.
Belagavi | ಪತ್ನಿಯ ನೆನಪಲ್ಲಿ ಮೂರ್ತಿ ಪ್ರತಿಷ್ಟಾಪಿಸಿದ ಪತಿ..!
ವಿಶಾಲ್ ಒಂದು ವರ್ಷದಲ್ಲೇ ನೆರಳನ್ನು ನೋಡುವುದು ಖುಷಿ ಪಡುವುದು ಮಾಡಿದ್ದಾನೆ. ಇದನ್ನು ಗಮನಿಸಿದ ತಾಯಿ ಸುನೀತಾ ಹಾಗೂ ತಂದೆ ಪುನೀತ್ ಕುಮಾರ್ ಮಗನ ಆಸಕ್ತಿ ಬಗ್ಗೆ ಅರ್ಥಮಾಡಿಕೊಂಡಿದ್ದಾರೆ. ಹೀಗೆ 4 ವರ್ಷದ ವಯಸ್ಸಿಗೆ ಸುಮಾರು 35 ಕ್ಕೂ ಹೆಚ್ಚು ಶ್ಯಾಡೋ ಕಲಾಕೃತಿಗಳನ್ನು ಬೆರಳಿನಲ್ಲಿ ಮೂಡಿಸಿದ್ದಾನೆ. ಇದರಲ್ಲಿ ಪ್ರಾಣಿ, ಪಕ್ಷಿ, ಮನುಷ್ಯರ ಆಕೃತಿಗಳು ಒಳಗೊಂಡಿವೆ.
ದಿನೇ ದಿನೇ ಮಗನ ಆಸಕ್ತಿಯನ್ನು ಗುರುತಿಸಿದ ಪೋಷಕರು ಅದಕ್ಕೆ ಬೇಕಾದ ಟ್ರೈನಿಂಗ್ ನೀಡಿದ್ದಾರೆ. ತಾಯಿಯೇ ಶಿಕ್ಷಕಿಯಾಗಿ ಎಲ್ಲಾವನ್ನು ನಿಭಾಯಿಸಿದ್ದಾರೆ. ಈ ವರ್ಷ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಈತ ಸ್ಥಾನ ಗಿಟ್ಟಿಸಿದ್ದಾನೆ. ಈತನ ಸಾಧನೆ ಎಲ್ಲಾರನ್ನು ಅಚ್ಚರಿ ಮೂಡಿಸಿದೆ.