ರಾಜ್ಯದಲ್ಲಿ ಕೊರೋನಾ ಸಂಕಷ್ಟದ ನಡುವೆ ಜುಲೈನಿಂದ ಶಾಲೆಗಳು ಪುನರಾರಂಭ..!

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಶಾಲೆಗಳ ಪುನಾರಂಭಕ್ಕೆ ಸರ್ಕಾರ ಪ್ಲಾನ್ ಮಾಡಿಕೊಳ್ಳುತ್ತಿದೆ. 3 ಹಂತದಲ್ಲಿ ಶಾಲೆಗಳನ್ನು ತೆರೆಯಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಜುಲೈ ಮೊದಲ ವಾರದಿಂದಲೇ ಬಹುತೇಕ ಶಾಲೆಗಳು ಆರಂಭವಾಗಲಿವೆ.

First Published Jun 3, 2020, 11:37 AM IST | Last Updated Jun 3, 2020, 11:47 AM IST

ಬೆಂಗಳೂರು(ಜೂ.03): ಕೊರೋನಾ ಸಂಕಷ್ಟದ ಸಂದರ್ಭದ ನಡುವಲ್ಲೇ ಶಾಲೆಗಳ ಪುನರಾರಂಭಿಸಲು ಸರ್ಕಾರ ಚಿಂತನೆ ನಡೆಸಿದ್ದು, ಜುಲೈನಿಂದಲೇ ತರಗತಿಗಳು ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಶಾಲೆಗಳ ಪುನಾರಂಭಕ್ಕೆ ಸರ್ಕಾರ ಪ್ಲಾನ್ ಮಾಡಿಕೊಳ್ಳುತ್ತಿದೆ. 3 ಹಂತದಲ್ಲಿ ಶಾಲೆಗಳನ್ನು ತೆರೆಯಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಜುಲೈ ಮೊದಲ ವಾರದಿಂದಲೇ ಬಹುತೇಕ ಶಾಲೆಗಳು ಆರಂಭವಾಗಲಿವೆ.

ಅಂತರ್‌ ರಾಜ್ಯ ಸಂಚಾರ ಅವಕಾಶ: ಇವಿಷ್ಟು ನಿಯಮ ಅನುಸರಿಸಲೇ ಬೇಕು

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದ ನಡೆದ ಸಭೆಯ ಬಳಿಕ ಶಿಕ್ಷಕರು ಸಿದ್ದರಾಗುವಂತೆ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಇದರ ಜೊತೆಗೆ ಶಾಲೆ ತೆರೆಯುವ ಮುನ್ನ SDMC ಸಭೆ ಕರೆದು ಶಾಲೆ ತೆರೆಯುವ ಬಗ್ಗೆ ಪೋಷಕರೊಂದಿಗೆ ಚರ್ಚಿಸಿ ಎಂದು ಸೂಚನೆ ನೀಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.