Corona Vaccine: ನಾಳೆಯಿಂದ ಮಕ್ಕಳಿಗೆ ಲಸಿಕೆ, ಸ್ವಲ್ಪ ಭಯ, ಹೆಚ್ಚು ನಿರೀಕ್ಷೆಯಿದೆ ಎಂದ ಮಕ್ಕಳು

ಮಕ್ಕಳ ಲಸಿಕೆ ಅಭಿಯಾನಕ್ಕೆ ( vaccination) ರಾಜ್ಯ ಆರೋಗ್ಯ ಇಲಾಖೆ ಸಿದ್ಧಗೊಂಡಿದ್ದು, ಸೋಮವಾರ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ 4,160 ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ 6.38 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 

First Published Jan 2, 2022, 2:51 PM IST | Last Updated Jan 2, 2022, 2:51 PM IST

ಬೆಂಗಳೂರು (ಜ. 02): 15 ರಿಂದ 18 ವಯೋಮಾನದ ಮಕ್ಕಳಿಗೆ ಜ.3 ರಿಂದ ಮಕ್ಕಳ ಲಸಿಕೆ ಅಭಿಯಾನ (Vaccination)  ಆರಂಭವಾಗಲಿದೆ. ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ದೇಶದಲ್ಲಿ 7.4 ಕೋಟಿ ಮಕ್ಕಳು ಲಸಿಕೆಗೆ ಅರ್ಹವಿದ್ದು, 15 ಕೋಟಿ ಹೆಚ್ಚುವರಿ ಲಸಿಕೆ ಡೋಸ್‌ ಅಗತ್ಯ ಬೀಳಲಿದೆ.

Covid 19: ಪಾಸಿಟಿವಿಟಿ ದರ ಶೇ. 5 ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಅಂತಿದ್ದಾರೆ ತಜ್ಞರು

ಮಕ್ಕಳ ಲಸಿಕೆ ಅಭಿಯಾನಕ್ಕೆ ರಾಜ್ಯ ಆರೋಗ್ಯ ಇಲಾಖೆ ಸಿದ್ಧಗೊಂಡಿದ್ದು, ಸೋಮವಾರ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ 4,160 ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ 6.38 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 

'ಸ್ವಲ್ಪ ಭಯ, ಹೆಚ್ಚು ನಿರೀಕ್ಷೆ ಇದೆ. ಲಸಿಕೆ ತೆಗೆದುಕೊಳ್ಳಲ ಭಯವೇನಿಲ್ಲ. ನಾವು ಸಿದ್ದರಿದ್ದೇವೆ' ಎಂದು ಉಡುಪಿಯ ಮಕ್ಕಳು ಹೇಳಿದ್ದಾರೆ.