Asianet Suvarna News Asianet Suvarna News

ಆಸ್ಪತ್ರೆ ಇದೆ, ಐಸಿಯು ಇದೆ, ವೆಂಟಿಲೇಟರ್ ಇದೆ ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ..!

Jul 6, 2020, 11:13 AM IST

ಬೆಂಗಳೂರು (ಜು. 06): ಕೊರೊನಾ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುಸಜ್ಜಿತ ಆಸ್ಪತ್ರೆಯೊಂದು ಸಜ್ಜಾಗಿದೆ. ಇಲ್ಲಿ ಐಸಿಯು ಇದೆ, ವೆಂಟಿಲೇಟರ್ ಇದೆ, ಬರೋಬ್ಬರಿ 80 ಬೆಡ್‌ಗಳೂ ಇದೆ. ಕೋವಿಡ್ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ.  ಆದರೆ ಚಿಕಿತ್ಸೆ ನೀಡಲು ಸ್ಟಾಫ್ ನರ್ಸ್‌ಗಳೇ ಇಲ್ಲ..! ಇದು ಶಿವಾಜಿನಗರದ ಆಸ್ಪತ್ರೆಯೊಂದರ ಚಿತ್ರಣ. ವೈದ್ಯರೇ ಬನ್ನಿ, ನಮ್ಮ ಜೊತೆ ಕೈ ಜೋಡಿಸಿ ಎಂದು ಆಸ್ಪತ್ರೆ ಎಂಡಿ ಡಾ. ತಹಾ ಮಾಟೀನ್ ಮನವಿ ಮಾಡಿಕೊಂಡಿದ್ದಾರೆ. 

ಕಲಬುರಗಿ: ಜನವಸತಿ ಪ್ರದೇಶದಲ್ಲೇ ಕೊರೋನಾ ಸೋಂಕಿತನ ಅಂತ್ಯ ಸಂಸ್ಕಾರ!

ಕೋವಿಡ್ ಚಿಕಿತ್ಸೆಗೆ ಐಸಿಯು ತರಬೇತಿ ಪಡೆದಿರುವ 4 ವೈದ್ಯರು, 12 ಮಂದಿ ಸ್ಟಾಫ್ ನರ್ಸ್‌ಗಳ ಅಗತ್ಯವಿದೆ ಎಂದು ಎಂಡಿ ಹೇಳಿದ್ದಾರೆ. ಅಗತ್ಯ ಸಿಬ್ಬಂದಿ ಸಿಕ್ಕರೆ 80 ಮದಿಗೆ ಚಿಕಿತ್ಸೆ ನೀಡುತ್ತೇವೆ ಎಂದು ತಹಾ ಮಾಟೀನ್ ಹೇಳಿದ್ದಾರೆ.
 

Video Top Stories