Ban Muslim Traders: ಕೊಲ್ಲೂರಿನಲ್ಲೂ ಮುಸ್ಲಿಮರಿಗೆ ವ್ಯಾಪಾರಕ್ಕೆ ತಡೆಕೋರಿ ಮನವಿ

ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ (Ban Muslim Traders) ವಿಚಾರ ಜಿಲ್ಲೆಯಿಂದ ಜಿಲ್ಲೆಗೆ ಹಬ್ಬುತ್ತಲೇ ಇದೆ. ಕೊಲ್ಲೂರಿನಲ್ಲೂ ಮುಸ್ಲಿಮರಿಗೆ ವ್ಯಾಪಾರಕ್ಕೆ ತಡೆಕೋರಿ ವಿಎಚ್‌ಪಿ (VHP) ಪಂಚಾಯತ್‌ಗೆ ಮನವಿ ಮಾಡಿದೆ. 

First Published Mar 25, 2022, 12:06 PM IST | Last Updated Mar 25, 2022, 12:06 PM IST

ಉಡುಪಿ (ಮಾ. 25): ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ (Ban Muslim Traders) ವಿಚಾರ ಜಿಲ್ಲೆಯಿಂದ ಜಿಲ್ಲೆಗೆ ಹಬ್ಬುತ್ತಲೇ ಇದೆ. ಕೊಲ್ಲೂರಿನಲ್ಲೂ ಮುಸ್ಲಿಮರಿಗೆ ವ್ಯಾಪಾರಕ್ಕೆ ತಡೆಕೋರಿ ವಿಎಚ್‌ಪಿ (VHP) ಪಂಚಾಯತ್‌ಗೆ ಮನವಿ ಮಾಡಿದೆ. 

'ಹಿಜಾಬ್ ವಿವಾದದ ನಂತರ, ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕೆಲವು ಮುಸ್ಲಿಂ ಕಿಡಿಗೇಡಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸುತ್ತಾರೆ. ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಹಿಂದೂಗಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡುವುದು ಬೇಡ ಎಂದು ಪಂಚಾಯತ್‌ಗೆ ಮನವಿ ಸಲ್ಲಿಸಿದ್ದೇವೆ. ಈ ಬಾರಿಯ ಕೊಲ್ಲೂರು ಜಾತ್ರೆಗೆ ಮುಸ್ಲಿಂ ವರ್ತಕರಿಗೆ ಅವಕಾಶ ಬೇಡ ಎಂದು ಮನವಿ ಮಾಡಿದ್ದೇವೆ' ಎಂದು ವಿಎಚ್‌ಪಿ ಮುಖಂಡ ಜಗದೀಶ್ ಹೇಳಿದ್ದಾರೆ. 
 

Video Top Stories