Asianet Suvarna News Asianet Suvarna News

ನಂದಿಬೆಟ್ಟದಲ್ಲಿ 'ನಮ್ಮ ನಂದಿ' ಅಭಿಯಾನಕ್ಕೆ ಸದ್ಗುರು ಚಾಲನೆ

Sep 18, 2021, 4:07 PM IST

ಬೆಂಗಳೂರು (ಸೆ. 18): ಇಶಾ ಫೌಂಡೇಶನ್ ವತಿಯಿಂದ ನಮ್ಮ ನಂದಿ ಅಭಿಯಾನಕ್ಕೆ ನಂದಿ ಬೆಟ್ಟದ ತಪ್ಪಲಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಚಾಲನೆ ನೀಡಿದರು. ಇನ್ನೆರಡು ವರ್ಷಗಳಲ್ಲಿ ನಂದಿಬೆಟ್ಟದಲ್ಲಿ ಸಾಕಷ್ಟು ಬದಲಾವಣೆ ತರುವುದಾಗಿ ಹೇಳಿದರು.

ಜಿಲ್ಲೆಯಾದ್ಯಂತ ಸಾಕಷ್ಟು ಯುವಕರನ್ನು ಸೇರಿಸಿಕೊಂಡು ಸಸಿ ನೆಡುವ ಕಾರ್ಯಕ್ರಮ ರೂಪಿಸುವುದಾಗಿ ಸದ್ಗುರು ಹೇಳಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ವಸತಿ ಶಾಲೆ ಆರಂಭಿಸುವುದಾಗಿ ಹೇಳಿದ್ದಾರೆ.  ಈ ಅಭಿಯಾನದಲ್ಲಿ ಡಿಸಿ ಅರ್ ಲತಾ, ಎಸ್‌ಪಿ ಮಿಥುನ್ ಕುಮಾರ್ ಭಾಗಿಯಾದರು.