'ಸೈನಿಕ'ನ ವಿರುದ್ಧ ಮುಗಿಬಿದ್ದ ಕೇಸರಿ ಮಿತ್ರರು, ಅಖಾಡಕ್ಕೆ ಬಾ ನೋಡ್ಕೋತೀನಿ ಎಂದ ರೇಣುಕಾಚಾರ್ಯ
- ಯೋಗಿ ವಜಾಕ್ಕೆ 10 ಶಾಸಕರ ದೂರು
- ನಾಯಕತ್ವದ ವಿರುದ್ಧ ಮಾತನಾಡಿರುವ ಮಂತ್ರಿ ತಲೆದಂಡಕ್ಕೆ ಆಗ್ರಹ
- ರೇಣುಕಾಚಾರ್ಯ ನೇತೃತ್ವದಲ್ಲಿ ಸಿಎಂಗೆ ದೂರು ಸಲ್ಲಿಕೆ
ಬೆಂಗಳೂರು (ಮೇ. 31): ರಾಜ್ಯ ಸರ್ಕಾರ ಹಾಗೂ ನಾಯಕತ್ವದ ಕುರಿತು ಮಾತನಾಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಲೆದಂಡದ ಮಾತು ಕೇಳಿ ಬರುತ್ತಿದೆ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸುಮಾರು ಹತ್ತಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ.
ಯೋಗೀಶ್ವರ್ ಬಿಜೆಪಿಯಲ್ಲ, ಪಕ್ಷಾಂತರಿ: ಸ್ವಪಕ್ಷದ ನಾಯಕನ ಅಚ್ಚರಿ ಹೇಳಿಕೆ
ಸಿಪಿ ಯೋಗೇಶ್ವರ್ ತಲೆದಂಡಕ್ಕೆ ಶಾಸಕ ರೇಣುಕಾಚಾರ್ಯ ಬಲವಾಗಿ ಆಗ್ರಹಿಸಿದ್ದಾರೆ.' ಮೆಗಾಸಿಟಿ ಹಗರಣ ಆತನ ಮೇಲಿದೆ. ಅರಣ್ಯ ಸಚಿವರಾಗಿ ಲೂಟಿ ಹೊಡೆದಿದ್ದಾರೆ. ನನ್ನ ಬಳಿ ಎಲ್ಲಾ ದಾಖಲಾತಿ ಇದೆ. ಕೋವಿಡ್ ಮುಗಿದ ಮೇಲೆ ಎಲ್ಲವನ್ನೂ ಮಾತನಾಡುತ್ತೇವೆ. ನಮಗೆ ಸಿಕ್ಸರ್ ಹೊಡೆಯುವುದೂ ಗೊತ್ತು, ಫೋರ್ ಹೊಡೆಯುವುದೂ ಗೊತ್ತು. ಕೋವಿಡ್ ಮುಗಿದ ಬಳಿಕ ಎಲ್ಲವನ್ನೂ ಬಯಲು ಮಾಡುತ್ತೇವೆ' ಎಂದಿದ್ದಾರೆ.