Russia Ukraine Crisis: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕದ ಎಂಬಿಬಿಎಸ್ ವಿದ್ಯಾರ್ಥಿ!

ಉಕ್ರೇನ್ ದೇಶದ ಮೇಲೆ ರಷ್ಯಾದ ಆಕ್ರಮಣ
ಉಕ್ರೇನ್ ಹಲವು ಪ್ರದೇಶಗಳು ಧ್ವಂಸ
ರಷ್ಯಾ ಉಕ್ರೇನ್ ನಲ್ಲಿ ಸಿಲುಕಿಹಾಕಿಕೊಂಡಿರುವ ಭಾರತದ ವಿದ್ಯಾರ್ಥಿಗಳು

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.24): ರಷ್ಯಾ (Russia) ಹಾಗೂ ಉಕ್ರೇನ್ ನ (Ukraine) ನಡುವೆ ಭೀಕರ ಯುದ್ಧ ಆರಂಭವಾಗಿರುವ ಬೆನ್ನಲ್ಲಿಯೇ ಎರಡೂ ದೇಶವನ್ನು ತೊರೆಯುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ಉಕ್ರೇನ್ ನಲ್ಲಿ ಭಾರೀ ಪ್ರಮಾಣದ ಸಾವುನೋವುಗಳು ಉಂಟಾಗಿದ್ದು, ಅಲ್ಲಿರುವ ನಾಗರೀಕರನ್ನು ಭಾರತಕ್ಕೆ ವಾಪಾಸ್ ಕರೆತರುವ ಪ್ರಯತ್ನ ನಡೆಯುತ್ತಿದೆ. ಕರ್ನಾಟಕದ ಗದಗ ಜಿಲ್ಲೆಯ ಎಂಬಿಬಿಎಸ್ (MBBS) ವಿದ್ಯಾರ್ಥಿ ಕೂಡ ಉಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಮಹಾಗಣಪತಿ ಬಿಳಿಮಗ್ಗದ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದಾರೆ. ಈ ನಡುವೆ ತಮ್ಮ ಮಗ ಸುರಕ್ಷಿತವಾಗಿದ್ದಾನೆ ಎಂದು ಮಹಾಗಣಪತಿ ಅವರ ಪಾಲಕರು ಹೇಳಿದ್ದಾರೆ. ಯುದ್ಧಪೀಡಿತ ಪ್ರದೇಶದಿಂದ ನಾವು ಸ್ವಲ್ಪ ದೂರದಲ್ಲಿದ್ದೇವೆ. ಇಲ್ಲಿಯವರೆಗೂ ಯುದ್ಧದ ಪರಿಣಾಮ ನಮ್ಮ ಮೇಲಾಗಿಲ್ಲ. ಸದ್ಯದ ಮಟ್ಟಿಗೆ ನಾವು ಸುರಕ್ಷಿತವಾಗಿದ್ದೇವೆ. ಆದರೆ, ರಷ್ಯಾದ ಆಕ್ರಮಣ ತೀವ್ರವಾಗಿರುವ ಬೆನ್ನಲ್ಲಿಯೇ ಹೆಚ್ಚಿನ ವಿದ್ಯಾರ್ಥಿಗಳು ತವರಿಗೆ ಹೋಗುತ್ತಿದ್ದಾರೆ. ಈ ನಡುವೆ ಏರ್ ಪೋರ್ಟ್ ಗಳು ಬಂದ್ ಆಗಿರುವ ಕಾರಣ ಇಲ್ಲಿಂದ ಯಾವಾಗ ಸುರಕ್ಷಿತವಾಗಿ ಹೊರಹೋಗುತ್ತೇವೆ ಎನ್ನುವ ಅರಿವಿಲ್ಲ' ಎಂದು ಮಹಾಗಣಪತಿ ಉಕ್ರೇನ್ ನಿಂದಲೇ ಸುವರ್ಟ್ ನ್ಯೂಸ್ ಜೊತೆ ಮಾತನಾಡಿದ್ದಾರೆ.

Russia Ukraine War ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ತಾವಿರುವ ಪ್ರದೇಶದಲ್ಲಿ ಈವರೆಗೂ ಯಾವುದೇ ದಾಳಿಯಾಗಿಲ್ಲ. ದಾಳಿ ನಡೆಯುತ್ತಿರುವ ಪ್ರದೇಶದಿಂದ ನಾವಿರುವ ಪ್ರದೇಶ 400 ಕಿಲೋಮೀಟರ್ ದೂರದಲ್ಲಿದೆ ಎಂದು ಮಹಾಗಣಪತಿ ತಿಳಿಸಿದ್ದಾರೆ.

Related Video