Asianet Suvarna News

ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಕಳಂಕಿತ ವ್ಯಕ್ತಿ ವೀಸಿ ವಿವಾದ. ಡಾ. ಜಯಕರ ಶೆಟ್ಟಿ ಸ್ಪಷ್ಟನೆ

Jun 13, 2021, 12:32 PM IST

ಬೆಂಗಳೂರು (ಜೂ. 13): ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹಂಗಾಮಿ ವಿಸಿ ನೇಮಕ ವಿಚಾರ ಬಹಳ ವಿವಾದಕ್ಕೀಡಾಗಿದೆ. 27 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಖಾಸಗಿ ಕಾಲೇಜಿನ ಪ್ರಾಂಶುಪಾಲರನ್ನು ಕರೆತಂದು ವಿಸಿಯಾಗಿ ನೇಮಕ ಮಾಡಲಾಗಿದೆ.

ವಿಸಿಯಾಗಿ ನೇಮಕವಾಗಿರುವ ಜಯಕರ ಶೆಟ್ಟಿ  ದಂತ ಕಾಲೇಜು ಸೀಟು ಅಕ್ರಮ ಆರೋಪ ಹೊತ್ತಿದ್ದಾರೆ. ಈ ಬಗ್ಗೆ ಸ್ವತಃ ಜಯಕರ ಶೆಟ್ರನ್ನ ಮಾತನಾಡಿಸಿದಾಗ, ನಮ್ಮ ಮೇಲೆ ಸಿಬಿಐ ದಾಳಿ ನಡೆದಿದ್ದು ನಿಜ. ಆದರೆ ನಮ್ಮ ಮೇಲೆ ಎಫ್‌ಆರ್ ದಾಖಲಾಗಿಲ್ಲ. ಚಾರ್ಜ್ ಶೀಟ್ ಆಗಲಿಲ್ಲ. ಅಲ್ಲಿಗೆ ಈ ಪ್ರಕರಣದಲ್ಲಿ ನಾನು ಆರೋಪಿ ಕೂಡಾ ಅಲ್ಲ' ಎಂದು ಹೇಳಿದ್ದಾರೆ.