Weekend Curfew: ಸಾಲ ಇದೆ, ಬಾಡಿಗೆ ಕಟ್ಬೇಕು, ನಮ್ಮ ಜೀವ ಉಳಿಸಿ; ಸಿಡಿದೆದ್ದ ಮಾಲಿಕರು

ಮುಂದಿನ ವಾರದಿಂದ ನೈಟ್‌ ಕರ್ಫ್ಯೂ (Night Curfew) ಮತ್ತು ವಾರಾಂತ್ಯದ ಕರ್ಫ್ಯೂ (Weekend Curfew) ಬಹಿಷ್ಕರಿಸಲು ಹೋಟೆಲ್‌, ಬಾರ್‌ ಮತ್ತು ಕಲ್ಯಾಣ ಮಂಟಪಗಳ ಮಾಲಿಕರ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.
 

First Published Jan 17, 2022, 3:49 PM IST | Last Updated Jan 17, 2022, 4:10 PM IST

ಬೆಂಗಳೂರು (ಜ. 17): ಮುಂದಿನ ವಾರದಿಂದ ನೈಟ್‌ ಕರ್ಫ್ಯೂ (Night Curfew) ಮತ್ತು ವಾರಾಂತ್ಯದ ಕರ್ಫ್ಯೂ (Weekend Curfew) ಬಹಿಷ್ಕರಿಸಲು ಹೋಟೆಲ್‌, ಬಾರ್‌ ಮತ್ತು ಕಲ್ಯಾಣ ಮಂಟಪಗಳ ಮಾಲಿಕರ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.

Corona Vaccine: ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಿಲ್ಲ, ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ

ನೈಟ್‌ ಕಫ್ರ್ಯೂ ಮತ್ತು ವಾರಾಂತ್ಯದ ಕಫ್ರ್ಯೂವಿನಿಂದ ಕೋವಿಡ್‌ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಅ ವೈಜ್ಞಾನಿಕ. ಹೋಟೆಲ್‌ ಉದ್ಯಮಕ್ಕೆ ಸರ್ಕಾರದ ನಿಯಮಗಳಿಂದ ಅನ್ಯಾಯವಾಗುತ್ತಿದೆ. ಕೋವಿಡ್‌ ನಿಯಮಾವಳಿಗಳನ್ನೆಲ್ಲ ಪಾಲನೆ ಮಾಡಿದರೂ ಬಂದ್‌ ಮಾಡಿಸುವಂತ ಕಾರ್ಯವನ್ನು ಮಾಡಿಸಲಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೊಟೇಲ್ ಮಾಲಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಹೋಟೆಲ್‌, ಬಾರ್‌ ಅ್ಯಂಡ್‌ ರೆಸ್ಟೋರೆಂಟ್‌ ಮತ್ತು ಪ್ರವಾಸೋದ್ಯಮ ವಾರಾಂತ್ಯದ ವ್ಯಾಪಾರ, ವಹಿವಾಟನ್ನೆ ನಂಬಿಕೊಂಡಿದೆ. ಕಳೆದ ಎರಡು ಅಲೆಯಲ್ಲಿ ಉದ್ಯಮ ಹದಗೆಟ್ಟು ಹೋಗಿತ್ತು. ಈಗ ಪುನಃ ಲಾಕ್‌ಡೌನ್‌, ಕಫ್ರ್ಯೂ ಹೇರುವಂತದ್ದು ಸಮಂಜಸವಲ್ಲ. ಸಾಲ ಇದೆ, ಬಾಡಿಗೆ ಕಟ್ಟಬೇಕು, ನಮ್ಮ ಜೀವ ಉಳಿಸಿ' ಎಂದು ಮನವಿ ಮಾಡಿದ್ದಾರೆ.