News Hour: ಅಕ್ಕಿ ರಾಜಕೀಯಕ್ಕೆ ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ!
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಅಕ್ಕಿ ಯುದ್ಧ ಮಂಗಳವಾರ ಇನ್ನೊಂದು ಹಂತಕ್ಕೇರುವ ಸಾಧ್ಯತೆ ಇದೆ. ಅಕ್ಕಿ ಕೊಡದ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡಲಿದ್ದರೆ, ಬಿಜೆಇ ಕೂಡ ಕಾಂಗ್ರೆಸ್‌ನ ವಿವಿಧ ನೀತಿಗಳ ವಿರುದ್ಧ ಪ್ರತಿಭಟನೆ ಮಾಡಲಿದೆ.
ಬೆಂಗಳೂರು (ಜೂ. 19): ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಅಕ್ಕಿ ರಾಜಕೀಯ ಈಗ ಪ್ರತಿಭಟನೆಯತ್ತ ಮುಖ ಮಾಡಿದೆ. ಚುನಾವಣಾ ಪ್ರಚಾರದ ವೇಳೆ ಎಲ್ಲೆಡೆ 10 ಕೆಜಿ ಅಕ್ಕಿ ಬಗ್ಗೆ ಸ್ವತಃ ಸಿದ್ಧರಾಮಯ್ಯ ಪ್ರಚಾರ ಮಾಡಿದ್ದರು. ಆದರೆ, ಈಗ ಅಕ್ಕಿ ಹೊಂದಿಸೋದೇ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ.
ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಲಿರುವ ಪ್ರತಿಭಟನೆಗೆ ಬಿಜೆಪಿ ಕೂಡ ಪ್ರತಿಭಟನೆ ಮಾಡುವ ಮೂಲಕವೇ ಟಕ್ಕರ್ ನೀಡಲು ಸಜ್ಜಾಗಿದೆ. ಅಕ್ಕಿ ವಿಚಾರದಲ್ಲಿ ರಾಜ್ಯ ಸರ್ಕಾರ ಸುಖಾಸುಮ್ಮನೆ ರಾಜಕೀಯ ಮಾಡುತ್ತಿದೆ ಎನ್ನುವ ಕಾರಣಕ್ಕೆ ನಾಳೆ ಬಿಜೆಪಿ ತನ್ನ 10 ವಿಭಾಗಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ. ಜುಲೈ 4 ರಂದು ಜಿಲ್ಲಾ ಮಟ್ಟದಲ್ಲಿ ಹಾಗೂ ಸದನದ ಒಳಗೆ ಹಾಗೂ ಹೊರಗೆ ಕೂಡ ಬಿಜೆಪಿ ಪ್ರತಿಭಟನೆ ನಡೆಯಲಿದೆ.
ಬಿಜೆಪಿ ಮೊದಲು ಎಲ್ಲರ ಖಾತೆಗೆ 15 ಲಕ್ಷ ಹಾಕಿ ನಂತರ ನಮ್ಮ ವಿರುದ್ಧ ಪ್ರತಿಭಟಿಸಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಈ ನಡುವೆ ವಿಧಾನಸಭೆ ಅಧಿವೇಶನಕ್ಕೆ ಇನ್ನೇನು 15 ದಿನಗಳಷ್ಟೇ ಬಾಕಿ ಇವೆ. ಈ ನಡುವೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಾರಾಗಬೇಕು ಎನ್ನುವ ನಿಟ್ಟಿನಲ್ಲಿ ಇನ್ನೂ ಗೊಂದಲ ಮುಂದುವರಿದಿದೆ. ರೇಸ್‌ನಲ್ಲಿ ಸಾಕಷ್ಟು ಹೆಸರೂಗಳು ಇವೆ.