Asianet Suvarna News Asianet Suvarna News

ಕಾರವಾರದ ವೀರಪುತ್ರನಿಗೆ ಬಾಂಗ್ಲಾ ಸ್ವತಂತ್ರ ದಿನದಂದು ಗೌರವ

- ಕಾರವಾರದ ನಿವೃತ್ತ ಮೇಜರ್‌ಗೆ ಬಾಂಗ್ಲಾದೇಶದಲ್ಲಿ ಗೌರವ

- ಕಾರವಾರದ ಗೋವಿಂದ ರಾಯಾ ಗಾಂವಕರ್‌ಗೆ ಗೌರವ 

- ಸೇನಾ ಹೆಲಿಕಾಪ್ಟರ್ ಪೈಲಟ್ ಆಗಿ ಹಲವು ವರ್ಷ ಸೇವೆ 

ಉತ್ತರ ಕನ್ನಡ (ಮೇ. 13): ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಿವಾಸಿ, ಹಾಗೂ ನಿವೃತ್ತ ಯೋಧ ಗೋವಿಂದ ರಾಯಾ ಗಾಂವಕರ್‌ಗೆ ಬಾಂಗ್ಲಾದೇಶದಿಂದ ಗೌರವ ಸಿಕ್ಕಿದೆ. ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಹೋರಾಡಿದ ಗೋವಿಂದ ಅವರನ್ನು ಬಾಂಗ್ಲಾ ಸರ್ಕಾರ ಸ್ಮರಿಸಿಕೊಂಡಿದೆ. ಕಳೆದ ಮಾರ್ಚ್‌ನಲ್ಲಿ ನಡೆದ ಬಾಂಗ್ಲಾದೇಶದ 50 ನೇ ಸ್ವತಂತ್ರೋತ್ಸವದಲ್ಲಿ ಗೌರವಿಸಲಾಗಿದೆ. ದೇಶದಿಂದ ತೆರಳಿದ್ದ 30 ಸೈನಿಕರ ಪೈಕಿ, ಕರ್ನಾಟಕದ ಏಕೈಕ ಯೋಧ ಗೋವಿಂದ ರಾಯ ಗಾಂವಕರ್ ಎಂಬುದು ಹೆಮ್ಮೆಯ ವಿಚಾರ. 

Video Top Stories