Koppal: ರೈಲ್ವೇ ಸೇತುವೆ ಮಾಡಿಸಿಕೊಡುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಸಚಿವ ಆನಂದ್‌ ಸಿಂಗ್‌ಗೆ ಗ್ರಾಮಸ್ಥರಿಂದ ತರಾಟೆ!

ಜಿಲ್ಲೆಯ ತಾಲೂಕಿನ ಹುಲಿಗೆ ಗ್ರಾಮಸ್ಥರು ಇಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ವಿರುದ್ಧ ರೊಚ್ಚಿಗೆದ್ದಿದ್ದು, ಫುಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರಿಗೆ ಒಂದು ರೈಲ್ವೇ ಸೇತುವೆ ಬೇಕಾಗಿದ್ದು, ಮೂರು ವರ್ಷಗಳ ಹಿಂದೆ ಅದನ್ನು ಮಾಡಿಸಿಕೊಡುವ ಆಶ್ವಾಸನೆಯನ್ನು ಸಚಿವರು ಗ್ರಾಮಸ್ಥರಿಗೆ ನೀಡಿದ್ದರು. 

First Published Mar 6, 2023, 9:02 PM IST | Last Updated Mar 6, 2023, 9:02 PM IST

ಕೊಪ್ಪಳ (ಮಾ.06): ಜಿಲ್ಲೆಯ ತಾಲೂಕಿನ ಹುಲಿಗೆ ಗ್ರಾಮಸ್ಥರು ಇಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ವಿರುದ್ಧ ರೊಚ್ಚಿಗೆದ್ದಿದ್ದು, ಫುಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರಿಗೆ ಒಂದು ರೈಲ್ವೇ ಸೇತುವೆ ಬೇಕಾಗಿದ್ದು, ಮೂರು ವರ್ಷಗಳ ಹಿಂದೆ ಅದನ್ನು ಮಾಡಿಸಿಕೊಡುವ ಆಶ್ವಾಸನೆಯನ್ನು ಸಚಿವರು ಗ್ರಾಮಸ್ಥರಿಗೆ ನೀಡಿದ್ದರು. ಆದರೆ ಸೇತುವೆ ಕೆಲಸ ಆರಂಭವಾಗಿಲ್ಲ. ಸಚಿವರು ಪ್ರತಿಬಾರಿ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಇಂದು ಹುಲಿಗೆ ಗ್ರಾಮದಲ್ಲಿ ಅಮ್ಮ ನಿಲಯ ಉದ್ಘಾಟನೆಗೆ ಬಂದಿದ್ದ ಆನಂದ್ ಸಿಂಗ್‌ರನ್ನು ಗ್ರಾಮಸ್ಥರು ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡರು. ಜನರ ಆಕ್ರೋಶ ಕಂಡು ಬೆಚ್ಚಿದ ಸಚಿವರ ಬಾಯಿಂದ ಮಾತೇ ಹೊರಡದಂತಾಗಿತ್ತು. ಹೆಚ್ಚಿನ ಮಾಹಿತಿಗೆ ವಿಡಿಯೋವನ್ನು ವೀಕ್ಷಿಸಿ.