
ಶವಗಳನ್ನ ನೂರಾರು ವರ್ಷ ಕೆಡದಂತೆ ಇಡುವ ಸಂಶೋಧನೆ; ಬೆಂಗಳೂರಿನ ವೈದ್ಯರಿಂದ ಸಾಧನೆ
ಸತ್ತ ವ್ಯಕ್ತಿಯ ಶವವನ್ನ ಕೆಲ ದಿನಗಳಿಟ್ಟರೇ ಕೊಳೆಯುತ್ತದೆ ಆದ್ರೇ ರಾಸಾಯನಿಕಗಳನ್ನ ಬಳಸಿ ನೂರಾರು ವರ್ಷಗಳ ಕಾಲ ಇಡುವ ಸಂಶೋದನೆ ಮೂಲಕ ಸಾಧನೆ ಮಾಡಿದ ಖ್ಯಾತಿ ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಸಾಧನೆ ಮಾಡಿದ್ದಾರೆ.
ಬೆಂಗಳೂರು (ಮೇ.6): ಸತ್ತ ವ್ಯಕ್ತಿಯ ಶವವನ್ನ ಕೆಲ ದಿನಗಳಿಟ್ಟರೇ ಕೊಳೆಯಲು ಆರಂಭವಾಗುತ್ತದೆ. ಆದರೆ, ರಾಸಾಯನಿಕಗಳನ್ನ ಬಳಸಿ ನೂರಾರು ವರ್ಷಗಳ ಕಾಲ ಇಡುವ ಸಂಶೋದನೆ ಮೂಲಕ ಸಾಧನೆ ಮಾಡಿದ ಖ್ಯಾತಿ ಬೆಂಗಳೂರಿನ ಆಕ್ಸ್‌ಫರ್ಡ್ (Bengaluru Oxford College) ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ (Dinesh Rao) ಸಾಧನೆ ಮಾಡಿದ್ದಾರೆ. ಸತ್ತ ನಂತರ ಕೆಲ ರಾಸಾಯನಿಕಗಳನ್ನ ಬಳಸಿ ಜೀವಂತ ರೀತಿಯೇ ಕಾಣುತ್ತಾರೆ ಕೊಳೆಯುವುದು ಅಥವಾ ವಾಸನೆಯು ಬರೋದಿಲ್ಲ. ನಾಲ್ಕು ಶವಗಳನ್ನು ಇದೇ ರೀತಿ ಸಂರಕ್ಷಿಸಿ ಇಡುವ ಮೂಲಕ, ಫಾರೆನ್ಸಿಕ್ ತಜ್ಞ ಡಾ.ದಿನೇಶ್ ಅವರ ಸಾಧನೆ ಜಗತ್ತಿನ ಮುಂದೆ ಅನಾವರಣವಾಗಿದೆ.
ಬಾಡೂಟಕ್ಕೆ ಹೋದವನು ಮರ್ಡರ್ ಅಗಿದ್ದ! ಜೊತೆಯಲ್ಲಿ ಉಂಡವರೇ ಅವನ ಹೆಣ ಹಾಕಿದ್ರು!