Remark Against Pejawara Shri : ವಿಚಾರಣೆಗೆ ಹಾಜರಾದ ಹಂಸಲೇಖ - ಪರ, ವಿರೋಧಿ ಪ್ರತಿಭಟನೆ

ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ  ವಿವಾದಕ್ಕೆ ಸಂಬಂಧಿಸಿದಂತೆ ಇಂದು ಬಸವನಗುಡಿ ಪೊಲೀಸ್ ಠಾಣೆಗೆ ಚಿತ್ರ ಸಾಹಿತಿ, ಸಂಗೀತ ನಿರ್ದೇಶಕರಾದ ಹಂಸಲೇಖ  ಅವರು ಹಾಜರಾಗಿದ್ದಾರೆ.  ಇಲ್ಲಿ ನಡೆಯುವ ವಿಚಾರಣೆಗಾಗಿ ಹಾಜರಾಗಿದ್ದಾರೆ. ಈ ಹಿಂದೆ ವಿಚಾರಣೆಗೆ  ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ನಿಟ್ಟಿನಲ್ಲಿ ತಮ್ಮ ವಕೀಲರ ಜೊತೆ ಆಗಮಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ.25): ಪೇಜಾವರ (Pejawara Swamiji) ಶ್ರೀಗಳ ವಿರುದ್ಧ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಬಸವನಗುಡಿ ಪೊಲೀಸ್ ಠಾಣೆಗೆ (Police Station) ಚಿತ್ರ ಸಾಹಿತಿ, ಸಂಗೀತ ನಿರ್ದೇಶಕರಾದ ಹಂಸಲೇಖ (hamsalekha) ಅವರು ಹಾಜರಾಗಿದ್ದಾರೆ. ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ನಿಟ್ಟಿನಲ್ಲಿ ತಮ್ಮ ವಕೀಲರ ಜೊತೆ ಆಗಮಿಸಿದ್ದಾರೆ. 

Hamsalekha Controversy: ಸರಿಗಮಪದಿಂದ ಹೊರ ಬಂದಿದ್ದಾರಾ..? ಶೋಗೆ ಹೊಸ ಜಡ್ಜ್?

ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಹಂಸಲೇಖ ಠಾಣೆಗೆ ಬಂದಿದ್ದಾರೆ. ಈ ವೇಳೆ ಠಾಣೆಯ ಎದುರು ಹಿಂದೂ ಸಂಘಟನೆಗಳ ಮುಖಂಡರು ಹಾಗು ದಲಿತಪರ ಸಂಘಟನೆಗಳ ಮುಖಂಡರು ಜಮಾಯಿಸಿದ್ದಾರೆ. ಒಂದೆಡೆ ಹಂಸಲೇಖ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಹಂಸಲೇಖ ಪರ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಪರ ಹಾಗು ವಿರುದ್ಧ ಘೋಷಣೆಗಳು ಕೇಳಿಬರುತ್ತಿದೆ. ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಠಾಣೆ ಎದುರೇ ಜೈ ಭೀಮ್, ಒಂದೇ ಮಾತರಂ ಘೋಷಣೆಗಳು ಕೇಳಿ ಬರುತ್ತಿದೆ. ಅಲ್ಲದೇ ಇತ್ತ ಹಿಂದೂ ಸಂಘಟನೆಗಳು ಸಸ್ಯಹಾರಿ ಮಾಂಸಹಾರಿಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ. 

Related Video