Asianet Suvarna News Asianet Suvarna News

ಡಿಕೆಶಿ ಮೇಲೆ ಸಿಬಿಐ ದಾಳಿಗೇನು ಕಾರಣ ಗೊತ್ತಾ?

ಕೆಪಿಸಿಸಿ ಸಾರಥಿ ಡಿ. ಕೆ. ಶಿವಕುಮಾರ್ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಇದರಿಂದ ಈಗಾಗಲೇ ಇಡಿ ಹಾಗೂ ಐಟಿ ದಾಳಿ ಎದುರಿಸಿದ್ದ ಡಿಕೆಶಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ಇನ್ನು ಕಾನೂನಿನ ಎಲ್ಲಾ ನಿಯಮಗಳನ್ನು ಅನುಸರಿಸಿ ಸಿಬಿಐ ಈ ದಾಳಿ ನಡೆಸಿದ್ದು, ಡಿಕೆಶಿಯನ್ನು ಅರೆಸ್ಟ್ ಮಾಡುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಅಷ್ಟಕ್ಕೂ ಈ ದಾಳಿಗೇನು ಕಾರಣ?

ಬೆಂಗಳೂರು(ಅ.05) ಕೆಪಿಸಿಸಿ ಸಾರಥಿ ಡಿ. ಕೆ. ಶಿವಕುಮಾರ್ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಇದರಿಂದ ಈಗಾಗಲೇ ಇಡಿ ಹಾಗೂ ಐಟಿ ದಾಳಿ ಎದುರಿಸಿದ್ದ ಡಿಕೆಶಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ಇನ್ನು ಕಾನೂನಿನ ಎಲ್ಲಾ ನಿಯಮಗಳನ್ನು ಅನುಸರಿಸಿ ಸಿಬಿಐ ಈ ದಾಳಿ ನಡೆಸಿದ್ದು, ಡಿಕೆಶಿಯನ್ನು ಅರೆಸ್ಟ್ ಮಾಡುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಅಷ್ಟಕ್ಕೂ ಈ ದಾಳಿಗೇನು ಕಾರಣ?

ಈ ಹಿಂದೆ ಡಿಕೆಶಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲೇ ಡಿಕೆಶಿ ಅಕ್ರಮ ಹಣ ಸಂಪಾದನೆಯ ಹಾಗೂ 44ಕೋಟಿ ನಗದು ವರ್ಗಾವಣೆಯ ಬಗ್ಗೆ ದಾಖಲೆಗಳು ಅಧಿಕಾರಿಗಳಿಗೆ ಸಿಕ್ಕಿದ್ದವು.ಡಿಕೆಶಿ ಇಂಧನ ಸಚಿವರಾಗಿದ್ದಾಗ ಈ ಅಕ್ರಮ ನಡೆಸಿದ್ದರೆನ್ನಲಾಘಿದ್ದು, ಇದಕ್ಕೆ ಸರ್ಕಾರಿ ಅಧಿಕಾರಿಗಳನ್ನೂ ಬಳಸಿಕೊಂಡಿದ್ದರೆಂಬ ಆರೋಪ ಕೇಳಿ ಬಂದಿತ್ತು, ಹೀಗೆ ಭ್ರಷ್ಟಾಚಾರ ನಡೆದಿರಬಹುದೆಂಬ ಅಂದಾಜಿನ ಮೇರೆಗೆ ಸಿಬಿಐಗೆ ಮಾಹಿತಿ ವರ್ಗಾವಣೆಯಾಗಿ ಈ ದಾಲಿ ನಡೆದಿದೆ ಎನ್ನಲಾಘಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ವಿಡಿಯೋದಲ್ಲಿ