Asianet Suvarna News Asianet Suvarna News

ಸಿಡಿ 'ಷಡ್ಯಂತ್ರ': ಎಚ್ಚರಿಕೆಯಿಂದ ಇದ್ದಿದ್ರೆ ಬಲಿಪಶು ಆಗ್ತಿರ್ಲಿಲ್ಲ ಎಂದ ಎಚ್‌ಡಿಕೆ!

ಸಿಡಿ ಸುಳಿಯಲ್ಲಿ ಸಿಲುಕಿರುವ ರಮೆಶ್ ಜಾರಕಿಹೊಳಿ ಸದ್ಯ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಮಂಗಳವಾರ ಬೆಳಗ್ಗೆ ತುರ್ತು ಸುದ್ದಿಗೋಷ್ಠಿ ನಡೆಸಿರುವ ಸಾಹುಕಾರ್ ಇದೊಂದು ಷಡ್ಯಂತ್ರ, ಸಿಡಿ ನಕಲಿ ಎಂದಿದ್ದರು./ ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ತನ್ನ ಪರವಾಗಿದ್ದಾರೆ ಎಂದೂ ಉಲ್ಲೇಖಿಸಿದ್ದರು.

ಬೆಂಗಳೂರು(ಮಾ.09) ಸಿಡಿ ಸುಳಿಯಲ್ಲಿ ಸಿಲುಕಿರುವ ರಮೆಶ್ ಜಾರಕಿಹೊಳಿ ಸದ್ಯ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಮಂಗಳವಾರ ಬೆಳಗ್ಗೆ ತುರ್ತು ಸುದ್ದಿಗೋಷ್ಠಿ ನಡೆಸಿರುವ ಸಾಹುಕಾರ್ ಇದೊಂದು ಷಡ್ಯಂತ್ರ, ಸಿಡಿ ನಕಲಿ ಎಂದಿದ್ದರು./ ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ತನ್ನ ಪರವಾಗಿದ್ದಾರೆ ಎಂದೂ ಉಲ್ಲೇಖಿಸಿದ್ದರು.

ಸಾಹುಕಾರ್ ಸಾಹೇಬ್ರ ಈ ಸುದ್ದಿಗೋಷ್ಠಿ ಬೆನ್ನಲ್ಲೇ, ಅತ್ತ ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಸುದ್ದಿಗೋಷ್ಠಿ ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಪರ ಮಾತನಾಡಿರುವ ಅವರು ಜಾರಕಿಹೊಳಿ ಎಚ್ಚರಿಕೆಯಿಂದ ಇದ್ದಿದ್ರೆ ಬಲಿಪಶು ಆಗುತ್ತಿರಲಿಲ್ಲ. ರಮೇಶ್ ಜಾರಕಿಹೊಳಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ವಿರುದ್ಧದ ಸಿಡಿ ಪ್ರಕರಣದ ಹಿಂದೆ ಒಬ್ಬ ಮಹಾನ್ ನಾಯಕ ಹಾಗೂ 2+3+4 ಜನರು ಇದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಈ ಷಡ್ಯಂತ್ರದ ಹಿಂದಿರುವ ಈ ಜನರು ಯಾರು, ಬಾಂಬೆ ಟೀಮ್​ನವರ ಕೆಲಸವಾ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಎರಡು ಎಂದರೆ ಇವರನ್ನ ಬಾಂಬೆ ಕರೆದುಕೊಂಡು ಹೋದವರಾ? ಮೂರು ಅಂದರೆ ಬಾಂಬೆಯಲ್ಲಿ ಇರಲು ವ್ಯವಸ್ಥೆ ಮಾಡಿಕೊಟ್ಟವರಾ? ನಾಲ್ಕು ಅಂದರೆ ಬಾಂಬೆಯಿಂದ ಇಲ್ಲಿಗೆ ಕರೆದುಕೊಂಡು ಬಂದವರಾ? ಎಂದು ಕುಮಾರಸ್ವಾಮಿ ಅವರು ಜಾರಕಿಹೊಳಿ ಮೇಲೆ ವ್ಯಂಗ್ಯಾಸ್ತ್ರದ ಪ್ರಶ್ನೆಗಳನ್ನ ಸುರಿಸಿದ್ದಾರೆ.

Video Top Stories