ನನಗೆ 4 ತಿಂಗಳ ಮೊದಲೇ ಗೊತ್ತಿತ್ತು ಎಂದು ಕಣ್ಣೀರು ಹಾಕಿದ ರಮೇಶ್ ಜಾರಕಿಹೊಳಿ!
ರಾಜಿನಾಮೆ ಬಳಿಕ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ಧಾರೆ. 'ಇದು ನಕಲಿ ಸೀಡಿ. ನಾಲ್ಕು ತಿಂಗಳ ಮೊದಲೇ ಸೀಡಿ ವಿಚಾರ ಗೊತ್ತಿತ್ತು ಎಂದು ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರು (ಮಾ. 09): ರಾಜಿನಾಮೆ ಬಳಿಕ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ಧಾರೆ. 'ಇದು ನಕಲಿ ಸೀಡಿ. ನಾಲ್ಕು ತಿಂಗಳ ಮೊದಲೇ ಸೀಡಿ ವಿಚಾರ ಗೊತ್ತಿತ್ತು. ಹೈಕಮಾಂಡ್ ಕೂಡಾ ಕರೆ ಮಾಡಿ ಹೇಳಿದ್ದರು. ನಾನು ತಪ್ಪು ಮಾಡಿಲ್ಲ ಎಂದು ನನಗೆ ಭಯವಿರಲಿಲ್ಲ. ಹಾಗಾಗಿ ನಾನು ಎದುರಿಸುವುದಕ್ಕೆ ಸಿದ್ಧನಾಗಿದ್ದೆ' ಎಂದು ಜಾರಕಿಹೊಳಿ ಹೇಳಿದ್ದಾರೆ.
ಜಾರಕಿಹೊಳಿ ರಾಸಲೀಲೆ ಕೇಸ್ : ಸಂತ್ರಸ್ತ ಯುವತಿ ಕೊನೆ ಬಾರಿ ಕಾಣಿಸಿಕೊಂಡಿದ್ದು ಇವರ ಜೊತೆಯಂತೆ!
'ರಾಜಿನಾಮೆ ನನ್ನ ವೈಯಕ್ತಿಕ ನಿರ್ಧಾರ. ನನಗೆ ರಾಜಿನಾಮೆ ಕೊಡು ಎಂದು ಯಾರೂ ಕೇಳಿಲ್ಲ. ನನ್ನಿಂದ ಪಕ್ಷಕ್ಕೆ ಮುಜುಗರವಾಗಬಾರದೆಂದು ರಾಜಿನಾಮೆ ನೀಡಿದ್ದೇನೆ. ಮಾನಸಿಕವಾಗಿ ನೊಂದಿದ್ದೇನೆ' ಎಂದಿದ್ದಾರೆ.