Karnataka Rain: ಮಳೆ ಹಾನಿ ಸಮೀಕ್ಷೆ ನಡೆಸಿಲ್ಲ, ಪರಿಹಾರ ಕೊಟ್ಟಿಲ್ಲ: ಸರ್ಕಾರದ ವಿರುದ್ಧ ಸಿದ್ದು ತರಾಟೆ

ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಮನೆಗಳು ಕುಸಿದು ಬಿದ್ದಿವೆ. ಜನಜೀವನ ಅಸ್ತವ್ಯಸ್ತವಾಗಿವೆ. 
 

First Published Nov 22, 2021, 5:01 PM IST | Last Updated Nov 22, 2021, 5:01 PM IST

ಬೆಂಗಳೂರು (ನ. 22): ರಾಜ್ಯದಲ್ಲಿ ಅಕಾಲಿಕ ಮಳೆಯಿಂದ (Untimely Rain) ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಮನೆಗಳು ಕುಸಿದು ಬಿದ್ದಿವೆ. ಜನಜೀವನ ಅಸ್ತವ್ಯಸ್ತವಾಗಿವೆ. 

'ಸರ್ಕಾರ ಈವರೆಗೂ ಪರಿಹಾರ (Relief Fund) ಕೊಟ್ಟಿಲ್ಲ. ಸಚಿವರು ಜಿಲ್ಲೆಗಳಿಗೆ ಹೋಗಿ ರೈತರಿಗೆ ಸ್ಪಂದಿಸುತ್ತಿಲ್ಲ. ಜನಸ್ವರಾಜ್ ಯಾತ್ರೆ ಅಂತ ಶಂಖ ಹಿಡ್ಕೊಂಡು ಹೊರಟಿದ್ದಾರೆ. ಜನರ ಕಷ್ಟಕ್ಕಿಂತ ಚುನಾವಣೆಯೇ ಇವರಿಗೆ ಮುಖ್ಯವಾಗಿದೆ. ಸಿಎಂ ಬೊಮ್ಮಾಯಿಯವರು ಕಾಟಾಚಾರಕ್ಕೆ ಸಭೆ ನಡೆಸಿದ್ದಾರೆ' ಎಂದು ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.