Asianet Suvarna News Asianet Suvarna News

BIG3:ಗರ್ಭಿಣಿಯರು, ನವಜಾತ ಶಿಶುಗಳ ಅಪೌಷ್ಠಿಕತೆ ನಿವಾರಿಸುವ ಜಿಲ್ಲಾಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ

ರಾಯಚೂರು ಜಿಲ್ಲೆಯ ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಅಪೌಷ್ಠಿಕತೆ ತೊಲಗಿಸಿ ಆರೋಗ್ಯ ಒದಗಿಸಬೇಕಾದ ಜಲ್ಲಾ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳೇ ಇಲ್ಲ. ಹಣವೆಲ್ಲವೂ ನುಂಗಣ್ಣರ ಪಾಲಾಗಿದೆ.

ರಾಯಚೂರು (ಆ.03) ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯೆಂದೇ ಕರೆಯುವ ರಾಯಚೂರು ಜಿಲ್ಲೆಯಲ್ಲಿ ಮಕ್ಕಳ ಅಪೌಷ್ಠಿಕತೆ ತಾಂಡವಾಡುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕಳೆದ 20 ವರ್ಷಗಳಿಂದ ಸವಲತ್ತು ಕೊಡುವ ನೆಪದಲ್ಲಿ ನೂರಾರು ಕೋಟಿ ರೂ. ವೆಚ್ಚ ಮಾಡಿದ್ದರೂ ಅದೆಲ್ಲವೂ ನುಂಗಣ್ಣರ ಪಾಲಾಗುತ್ತಿದೆ. ಇನ್ನು ಅಪೌಷ್ಠಿಕತೆಯಿಂದ ಬಳಲುತ್ತಾ ಸಾವಿರಾರು ಮಕ್ಕಳು ಸಾವಿನ ದವಡೆಯಲ್ಲಿ ನರಳುತ್ತಿವೆ. ಇನ್ನು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದಕ್ಕೆ ಹಾಗೂ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಚಿಕಿತ್ಸೆಗೆ ಅನುಕೂಲ ಆಗುವಂತೆ ರಾಯಚೂರಿನಲ್ಲಿ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದ್ದರೂ, ಇಲ್ಲಿಯೂ ನುಂಗಣ್ಣರು ಕೈಚಳಕ ತೋರಿಸಿ ಬಸವರನ್ನು ಹಾಗೂ ಅವರ ಮಕ್ಕಳನ್ನು ಸಾವಿನ ಶೂಲಕ್ಕೆ ಏರಿಸುತ್ತಿದ್ದಾರೆ. ಇಲ್ಲಿಗೆ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್‌ ಶಾವರು ಬಂದು ಕಾಮಗಾರಿ ಉದ್ಘಾಟನೆ ಮಾಡಿದ್ದರೂ, ಭ್ರಷ್ಟಾಚಾರ ಮಾಡುವ ಮೂಲಕ ಬಡಜನರಿಗೆ ಮೂಲಸೌಕರ್ಯ ಸಿಗದಂತೆ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲದೆ ನವಜಾತ ಶಿಶುಗಳು ಹಾಗೂ ಗರ್ಭಿಣಿಯರು ಬಳಲುತ್ತಿದ್ದು, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌-3ನಿಂದ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ರಾಜಕೀಯ ಪ್ರಿನಿಧಿಗಳಿಗೆ ಬಿಸಿ ಮುಟ್ಟಿಸಲಾಗಿದೆ.

Video Top Stories