Rahul Gandhi Disqualified: ಪ್ರಜಾಪ್ರಭುತ್ವಕ್ಕೆ ಕಳಂಕ, ಸತ್ಯವನ್ನು ದಮನಿಸುವ ಯತ್ನ!

ರಾಹುಲ್‌ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದು, ಪ್ರಜಾಪ್ರಭುತ್ಬಕ್ಕೆ ಕಳಂಕ. ಇದು ಸತ್ಯವನ್ನು ದಮನಿಸುವ ಯತ್ನ ಎಂದು ಕಾಂಗ್ರೆಸ್‌ ವಕ್ತಾರ ನಟರಾಜ್‌ ಗೌಡ ಕಿಡಿಕಿಡಿಯಾಗಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.24): ವಯನಾಡು ಸಂಸದ ರಾಹುಲ್‌ ಗಾಂಧಿಯ ಸಂಸದ ಸ್ಥಾನವನ್ನು ಅನರ್ಹ ಮಾಡಿದ್ದು, ಪ್ರಜಾಪ್ರಭುತ್ವಕ್ಕೆ ಕಳಂಕ ಆಗಿರುವ ಸ್ಥಿತಿ. ಇದು ಸತ್ಯವನ್ನು ದಮನ ಮಾಡುವ ಪ್ರಯತ್ನ ಎಂದು ಕಾಂಗ್ರೆಸ್‌ ವಕ್ತಾರ ನಟರಾಜ್‌ ಗೌಡ ಹೇಳಿದ್ದಾರೆ.

ಇದು ರಾಹುಲ್‌ ಗಾಂಧಿಗೆ ಆಗಿರುವ ಹಿನ್ನಡೆಯಲ್ಲಿ. ಸತ್ಯ, ಧರ್ಮದ ಪರವಾಗಿ ಯಾರೆಲ್ಲಾ ಮಾತನಾಡುತ್ತಾರೆ ಅವರೆಲ್ಲರನ್ನೂ ಹತ್ತಿಕ್ಕುವ ಯತ್ನ ಇದು ಎಂದು ಹೇಳಿದ್ದಾರೆ. ಅದಾನಿ ಭ್ರಷ್ಟಾಚಾರದ ವಿರುದ್ಧ ರಾಹುಲ್‌ ಗಾಂಧಿ ಹೋರಾಟ ಮಾಡುತ್ತಿದ್ದ ಸಮಯದಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಭಾರತದ ಒಕ್ಕೊರಲ ಧ್ವನಿಗೆ ನನ್ನ ಹೋರಾಟ, ಯಾವುದೇ ತ್ಯಾಗಕ್ಕೂ ಸಿದ್ಧ; ರಾಹುಲ್ ಗಾಂಧಿ ಟ್ವೀಟ್!

ಇಂಥ ತೀರ್ಪು ಬರೋಕು ನರೇಂದ್ರ ಮೋದಿ ಸರ್ಕಾರವೇ ಕಾರಣ. ಕೋಲಾರದಲ್ಲಿ ರಾಹುಲ್‌ ಗಾಂಧಿ ಮಾತನಾಡುವಾಗ, ಲಲಿತ್‌ ಮೋದಿ, ನರೇಂದ್ರ ಮೋದಿ, ನೀರವ್‌ ಮೋದಿ ಬಗ್ಗೆ ಮಾತನಾಡಿದ್ದರು. ಆದರೆ, ಇಲ್ಲಿ ಅವರು ಯಾರೂ ದೂರು ನೀಡಿರಲಿಲ್ಲ ಎಂದಿದ್ದಾರೆ.

Related Video