ಪ್ರಿಯಾಂಕ್ ಖರ್ಗೆಗೆ ನೋಟಿಸ್, ಯುಟಿ ಖಾದರ್ ಗರಂ!

ಪಿಎಸ್ಐ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿರುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕ ಯುಟಿ ಖಾದರ್, ನೋಟಿಸ್ ನೀಡಿರುವ ಕ್ರಮವನ್ನು ಟೀಕಿಸಿದ್ದಾರೆ,
 

First Published Apr 25, 2022, 6:03 PM IST | Last Updated Apr 25, 2022, 6:03 PM IST

ಬೆಂಗಳೂರು (ಏ.25): ಪಿಎಸ್ಐ ನೇಮಕಾತಿ ವಿಚಾರದಲ್ಲಿ (PSI Recruitment Scam) ಕಾಂಗ್ರೆಸ್ ಶಾಸಕ (Congress MLA) ಪ್ರಿಯಾಂಕ್ ಖರ್ಗೆಗೆ (Priyank Kharge) ಸಿಐಡಿ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ. ತನಿಖೆ ಬಿಟ್ಟು, ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡ್ತಾರೆ. ಈ ಬೆದರಿಕೆಗೆ ಕಾಂಗ್ರೆಸ್ ಬಗ್ಗೋದಿಲ್ಲ ಎಂದು ಯುಟಿ ಖಾದರ್ (UT Khader) ಹೇಳಿದ್ದಾರೆ.

ಅಧಿಕಾರಿಗಳ ಬೆಂಬಲ ಇಲ್ಲದೆ ನೇಮಕಾತಿ ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಕೊಟ್ಟಿದ್ದಾರೆ.  ಈ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲವೇ, ಇದು ಗುಪ್ತಚರ ವೈಫಲ್ಯ. ಮಾಹಿತಿ ಕೊಟ್ಟವರಿಗೆ ನೋಟಿಸ್ ನೀಡುವುದು ವ್ಯವಸ್ಥೆಯೇ. ಬಿಜೆಪಿ ಸರ್ಕಾರ ಇರೋವಾಗಲೇ ಇಂಥದ್ದೆಲ್ಲ ಯಾಕಾಗುತ್ತದೆ. ಇದು ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ಯುಟಿ ಖಾದರ್ ಹೇಳಿದ್ದಾರೆ.

CID Notice: ಪ್ರಿಯಾಂಕ್ ಖರ್ಗೆ ಹಿಂದೆ ಪಕ್ಷ ಇದೆ, ಬೆದರಿಕೆಗೆ ಬಗ್ಗಲ್ಲ; ಸಿದ್ದರಾಮಯ್ಯ

ಅಧಿಕಾರಿಗಳ ಸಹಾಯವಿಲ್ಲದೆ ಇದೆಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಆದರೆ, ಸಾರ್ವಜನಿಕವಾಗಿ ಇರೋ ಮಾಹಿತಿ ನೀಡಿದ ಪ್ರಿಯಾಂಕ್ ಖರ್ಗೆಗೆ ಸರ್ಕಾರ ನೋಟಿಸ್ ಜಾರಿ ಮಾಡುತ್ತದೆ. ಸರ್ಕಾರದ ಹಿಂದಿರುವ ಉದ್ದೇಶವಾದರೂ ಏನು. ನಿರುದ್ಯೋಗ ಹಾಗೂ ಭ್ರಷ್ಟಾಚಾರದ ಕುರಿತಾಗಿ ಸರ್ಕಾರದ ವಿರುದ್ಧ ಯಾರೂ ಮಾತನಾಡಲೇಬಾರದೇ? ಎಂದು ಖಾದರ್ ಪ್ರಶ್ನೆ ಮಾಡಿದ್ದಾರೆ.