
PSI Recruitment Scam ಇದು ಲೇಡಿ ಕಿಂಗ್‌ಪಿನ್ ದಿವ್ಯಾ ಹಾಗರಗಿ ಡೀಲ್ ಮಾಡುತ್ತಿದ್ದ ಪರಿ!
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಿಕ್ಕಿ ಬೀಳಬಾರದೆಂಬ ಉದ್ದೇಶದಿಂದ ನಗದು ವ್ಯವಹಾರದ ಮೂಲಕ ಮಾತ್ರ ದಿವ್ಯ ಹಾಗರಗಿ ಡೀಲ್ ಮಾಡುತ್ತಿದ್ದುದು ಈಗ ಬಯಲಾಗಿದೆ.
ಕಲಬುರಗಿ (ಏ.22) : ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಕಿಂಗ್‌ಪಿನ್‌ಗಳ ಮಸಲತ್ತು ಬಯಲಾಗಿದೆ. ಸಿಐಡಿ (CID) ವಿಚಾರಣೆ ವೇಳೆ ಪರೀಕ್ಷೆ ಬರೆದ ಅಭ್ಯರ್ಥಿಗಳು ಬಿಜೆಪಿ ನಾಯಕಿ ದಿವ್ಯಾ ಹಾಗರಗಿ (Divya hagargi) ಯಾವ ರೀತಿ ಹಣ ಪಡೆದರು ಎಂಬ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಸಿಕ್ಕಿ ಬೀಳಬಾರದೆಂಬ ಉದ್ದೇಶದಿಂದ ಓನ್‌ಲೈನ್ ಬದಲು ಕ್ಯಾಶ್ ಪಡೆದಿದ್ದ ದಿವ್ಯಾ ಅಭ್ಯರ್ಥಿಗಳಿಂದ ತಲಾ 80 ಲಕ್ಷ ನಗದು ರೂಪದಲ್ಲಿ ಪಡೆದಿದ್ದಾರೆಂದು ತನಿಖೆಯಿಂದ ತಿಳಿದುಬಂದಿದೆ.
ಲಕ್ಷ ಲಕ್ಷ ಸಾಲ ಮಾಡಿ, ಚಿನ್ನ ಆಸ್ತಿ ಮಾರಾಟ ಮಾಡಿ ದಿವ್ಯಗೆ ಹಣ ಕೊಟ್ಟಿದ್ದೆವೆ ಎಂದು ಸಿಐಡಿ ವಿಚಾರಣೆಯಲ್ಲಿ ಅಭ್ಯರ್ಥಿಗಳು ಬಾಯಿ ಬಿಟ್ಟಿದ್ದಾರೆ. ಈ ರೀತಿ ಹತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಕೊಟ್ಟಿದ್ದಾರೆ ಎಂಬ ಮಾಹಿತಿ ಈಗ ಬಯಲಾಗಿದೆ.