Asianet Suvarna News Asianet Suvarna News

ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಬಂಧನ

ಪಿಎಸ್‌ಐ ಹಗರಣದ ಕಿಂಗ್‌ ಪಿನ್ ದಿವ್ಯಾ ಹಾಗರಗಿ ಬಂಧನವಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಅಡಗಿ ಕುಳಿತಿದ್ದರು. ಪುಣೆಯಿಂದ ಕಲಬುರಗಿಯತ್ತ ಕರೆತರಲಾಗುತ್ತಿದೆ. ದಿವ್ಯಾ ಹಾಗರಗಿ ಜೊತೆಗೆ 5 ಮೇಲ್ವಿಚಾರಕರನ್ನು ಬಂಧಿಸಲಾಗಿದೆ. 

ಬೆಂಗಳೂರು (ಏ. 29): ಪಿಎಸ್‌ಐ ಹಗರಣದ (PSI Recruitment Scam) ಕಿಂಗ್‌ ಪಿನ್ ದಿವ್ಯಾ ಹಾಗರಗಿ (Divya Hagaagi) ಬಂಧನವಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಅಡಗಿ ಕುಳಿತಿದ್ದರು. ಪುಣೆಯಿಂದ ಕಲಬುರಗಿಯತ್ತ ಕರೆತರಲಾಗುತ್ತಿದೆ. ದಿವ್ಯಾ ಹಾಗರಗಿ ಜೊತೆಗೆ 5 ಮೇಲ್ವಿಚಾರಕರನ್ನು ಬಂಧಿಸಲಾಗಿದೆ. 

2021ರ ಅ.3ರಂದು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ರಾಜ್ಯಾದ್ಯಂತ 92 ಕೇಂದ್ರಗಳಲ್ಲಿ ಒಟ್ಟು 54,104 ಅಭ್ಯರ್ಥಿಗಳು ಪರೀಕ್ಷೆಗೆ ಬರೆದಿದ್ದರು. ಇದುವರೆಗಿನ ತನಿಖೆಯಲ್ಲಿ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲೇ 7 ಅಕ್ರಮ ನಡೆದಿರೋದು ಖಚಿತವಾಗಿದೆ ಎಂದು ಸಿಐಡಿ ಮೂಲಗಳು ಖಚಿತಪಡಿಸಿವೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 11 ಪಿಎಸ್‌ಐ ಪರೀಕ್ಷಾ ಕೇಂದ್ರಗಳಿದ್ದವು, ಜಿಲ್ಲೆಯಿಂದ 92 ಅಭ್ಯರ್ಥಿಗಳು ನೇಮಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಈ ಪೈಕಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರ ಪೈಕಿ 11 ಅಭ್ಯರ್ಥಿಗಳು ಆಯ್ಕೆ ಯಾಗಿದ್ದಾರೆ.

ಇದರಲ್ಲಿ 7 ಅಭ್ಯರ್ಥಿಗಳು ಅಕ್ರಮದ ಹಾದಿಯಿಂದ ನೇಮಕ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರೋದು ಸಿಐಡಿ ತನಿಖೆಯಿಂದ ಬಯಲಾಗಿದೆ. ಇನ್ನುಳಿದ ನಾಲ್ವರಲ್ಲಿ ಇಬ್ಬರ ವಿಚಾರಣೆ ನಡೆದಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ 7 ಜನ ಅಭ್ಯರ್ಥಿಗಳು ಸೇರಿ ಒಟ್ಟು 16 ಜನರ ಬಂಧನವಾಗಿದೆ.

Video Top Stories