ಸರ್ಕಾರವನ್ನೇ ಅಲುಗಾಡಿಸಿದ್ದ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮತ್ತೆ ವಿವಾದ!
ಚಾಮರಾಜಪೇಟೆ ಬೆನ್ನಲ್ಲೇ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮತ್ತೆ ಭುಗಿಲೆದ್ದಿದೆ. ವರ್ಷಕ್ಕೆ ಒಂದು ಬಾರಿ ಗಣೇಶೋತ್ಸವ ಆಚರಿಸಲು ಈದ್ಗಾ ಮೈದಾನದಲ್ಲಿ ಅವಕಾಶ ನೀಡಬೇಕು ಎಂದು ಹಿಂದೂ ಪರ ಸಂಘಟನಗಳು ಮತ್ತೊಮ್ಮೆ ಮನವಿ ಮಾಡಿದೆ.
ಬೆಂಗಳೂರು (ಆ.12): ಚಾಮರಾಜಪೇಟೆ ಬೆನ್ನಲ್ಲೇ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮತ್ತೆ ಭುಗಿಲೆದ್ದಿದೆ. ವರ್ಷಕ್ಕೆ ಒಂದು ಬಾರಿ ಗಣೇಶೋತ್ಸವ ಆಚರಿಸಲು ಈದ್ಗಾ ಮೈದಾನದಲ್ಲಿ ಅವಕಾಶ ನೀಡಬೇಕು ಎಂದು ಹಿಂದೂ ಪರ ಸಂಘಟನಗಳು ಮತ್ತೊಮ್ಮೆ ಮನವಿ ಮಾಡಿದೆ. 1990ರ ದಶಕದಲ್ಲಿ ಇಡೀ ದೇಶವೇ ಈದ್ಗಾ ಮೈದಾನದ ವಿಚಾರದಲ್ಲಿ ಹೊತ್ತಿ ಉರಿದಿದೆ. ಇದೀಗ ಮತ್ತೆ ವಿವಾದಗ ಕಿಡಿ ಹೊತ್ತಿಕೊಂಡಿದೆ. ಇತ್ತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದೀಗ ಕಂದಾಯ ಇಲಾಖೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಲು ಸಿದ್ದತೆ ಮಾಡಿಕೊಂಡಿದೆ. ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಸಚಿವ ಆರ್ ಅಶೋಕ್ ನಾಳೆ ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಭೇಟಿ ನೀಡಲಿದ್ದಾರೆ. ಆಗಸ್ಟ್ 15 ರಂದು ಈದ್ಗಾ ಮೈದಾನದಲ್ಲಿ ಕಂದಾಯ ಅಧಿಕಾರಿಗಳಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ ಎಂದು ಅಶೋಕ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಲೋಕಾಯುಕ್ತ ವಾರ್, ಪ್ರಿಯಾಂಕ್ ಖರ್ಗೆ ವಿವಾದ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.