ಸಿಟಿ ರವಿ ಖಾನಪುರ ಠಾಣೆಯಿಂದ ಬೆಂಗಳೂರಿಗೆ ಶಿಫ್ಟ್, ಪೊಲೀಸರ ವಿರುದ್ದ ಬಿಜೆಪಿ ಆಕ್ರೋಶ!
ಸಿಟಿ ರವಿ ಬಂಧನ ವಿರೋಧಿ ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ಇತ್ತ ಕಾಂಗ್ರೆಸ್ ಸಿಟಿ ರವಿ ವಿರುದ್ದ ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆ ಸಿಟಿ ರವಿಯನ್ನು ಖಾನಪುರದಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗತ್ತಿದೆ.
ಬೆಳಗಾವಿ(ಡಿ.19) ವಿಧಾನ ಪರಿಷತ್‌ನಲ್ಲಿ ಸಿಟಿ ರವಿ ಅಕ್ಷೇಪಾರ್ಹ ಪದವನ್ನು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಳಸಿದ್ದಾರೆ ಅನ್ನೋ ಆರೋಪದಡಿ ಕೋಲಾಹಲ ಸೃಷ್ಟಿಯಾಗಿದೆ. ಬೆಳಗಾವಿ ಪೊಲೀಸರು ಸಿಟಿ ರವಿಯನ್ನು ಬಂಧಿಸಲಾಗಿದೆ. ಈ ಬಂಧನ ಇದೀಗ ಭಾರಿ ಹೈಡ್ರಾಮಕ್ಕೆ ಕಾರಣವಾಗಿದೆ. ಇದೀಗ ಸಿಟಿ ರವಿಯನ್ನು ಖಾನಪುರದಿಂದ ಬೆಂಗಳೂರಿಗೆ ಪೊಲೀರು ಶಿಫ್ಟ್ ಮಾಡಲು ನಿರ್ಧರಿಸಿದ್ದಾರೆ. ಇತ್ತ ಸಿಟಿ ರವಿ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ನಡೆಸಿದ ಹಲ್ಲೆ ವಿರುದ್ದ ದೂರು ದಾಖಲಾಗಿದೆ.