ಕೊರೋನಾ 3 ನೇ ಅಲೆ ಬಿಸಿ, ಮೋದಿಗೆ ಕಸಿವಿಸಿ, ಸೋಂಕು ಹೆಚ್ಚಳವಾದರೆ ಮತ್ತೆ ಲಾಕ್‌ಡೌನ್.?
ದೇಶಾದ್ಯಂತ ಅನ್‌ಲಾಕ್ ಆಗುತ್ತಿದ್ದಂತೆ ಜನರು ಪ್ರವಾಸಿ ತಾಣಗಳಿಗೆ, ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತಿರುವುದ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜು. 14): ದೇಶಾದ್ಯಂತ ಅನ್‌ಲಾಕ್ ಆಗುತ್ತಿದ್ದಂತೆ ಜನರು ಪ್ರವಾಸಿ ತಾಣಗಳಿಗೆ, ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತಿರುವುದ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಜನರ ನಿರ್ಲಕ್ಷ್ಯ ಮುಂದುವರೆದರೆ ಮತ್ತಷ್ಟು ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.
ಕೊರೋನಾ ಕೇಸ್‌ಗಳ ಸಂಖ್ಯೆ ಮತ್ತೆ ಹೆಚ್ಚಾದರೆ ಲಾಕ್‌ಡೌನ್ ಬಿಟ್ಟು ಬೇರೆ ದಾರಿ ಸರ್ಕಾರದ ಬಳಿಯಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಎಚ್ಚರಿಸಿದ್ಧಾರೆ.