Chitradurga Fort: ಉಕ್ಕಿನ ಕೋಟೆಯಲ್ಲಿ ಹಂದಿಗಳ ಹಾವಳಿ: ದ್ವಾರಬಾಗಿಲನ್ನೇ ಮುಚ್ಚಿರೊ ಕಿಡಿಗೇಡಿಗಳು!
*ಐತಿಹಾಸಿಕ ಹಿನ್ನೆಲೆಯ ಪ್ರವಾಸಿತಾಣದ ಆವರಣದಲ್ಲಿ ಹಂದಿ ಸಾಕಣೆ
*ಕೋಟೆಯ ಹಿಂಭಾಗದಲ್ಲಿರುವ ಬಾಗಿಲನ್ನೇ ಮುಚ್ಚಿರೊ ಕಿಡಿಗೇಡಿಗಳು
*ಹಂದಿಗಳ ಸಾಕಣೆಯಿಂದ ಕೋಟೆಯ ಆವರಣದಲ್ಲಿ ದುರ್ನಾತ
*ಕೋಟೆಯ ಹೊರಭಾಗವನ್ನು ಸಂರಕ್ಷಿಸುವಲ್ಲಿ ನಿರ್ಲಕ್ಷ್ಯ
*ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಚಿತ್ರದುರ್ಗ (ಡಿ. 24): ನಗರಪ್ರದೇಶಗಳಲ್ಲಿ ಜನರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡೋದು ಸಹಜ. ಆದ್ರೆ ಐತಿಹಾಸಿಕ ಹಿನ್ನೆಲೆಯಳ್ಳ ಚಿತ್ರದುರ್ಗದ ಏಳು ಸುತ್ತಿನ ಕೋಟೆಯ (Chitradurga Fort) ಹಿಂಭಾಗದಲ್ಲಿರುವ ದ್ವಾರಬಾಗಿಲನ್ನೇ ಮುಚ್ಚಿರೊ ಕಿಡಿಗೇಡಿಗಳು, ಅಕ್ರಮವಾಗಿ ಹಂದಿ ಸಾಕಣೆ ಮಾಡ್ತಿದ್ದಾರೆ. ಹೀಗಾಗಿ ಕೋಟೆಯ ಹೊರಭಾಗ ಶಿಥಿಲಾವಸ್ಥೆಗೆ ತಲುಪಿದ್ದೂ, ಅಕ್ರಮ ಚಟುವಟಿಕೆಗಳ ತಾಣವಾಗಿ ಪ್ರವಾಸಿತಾಣ ಮಾರ್ಪಟ್ಟಿದೆ.
ಇಲ್ಲಿ ಹಲವು ತಿಂಗಳುಗಳಿಂದ ಅಕ್ರಮವಾಗಿ ಹಂದಿ ಸಾಕಣೆ ಎಗ್ಗಿಲ್ಲದೇ ನಡೆಯುತ್ತಿದೆ. ಕರುವರ್ತೇಶ್ವರ ಸ್ವಾಮಿ ದೇಗುಲಕ್ಕೆ ತೆರಳುವ ಮಾರ್ಗದಲ್ಲಿನ ಲಾಲ್ ಕೋಟೆಯ ದ್ವಾರಬಾಗಿಲನ್ನು ಸಂಪೂರ್ಣ ಬಂದ್ ಮಾಡಿರೋ ಕಿಡಿಗೇಡಿಗಳು, ಸುತ್ತಲೂ ಬೇಲಿ ಹಾಕಿ ಹಂದಿಗಳ ಕೊಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ನೂರಾರು ಹಂದಿಗಳ ಸಾಕಣೆ ಕೋಟೆಯ ಬಳಿ ನಡೆಯುತ್ತಿರುವ ಪರಿಣಾಮ ಕೋಟೆಯ ಆವರಣದಲ್ಲಿ ದುರ್ನಾತ ಬೀರುತ್ತಿದೆ. ಜೊತೆಗೆ ಕೇವಲ ಕೋಟೆಯ ಒಳಭಾಗವನ್ನು ಮಾತ್ರ ಕಾಳಜಿಯಿಂದ ನೋಡಿಕೊಳ್ಳುವ ಪುರಾತತ್ವ ಇಲಾಖೆ ಅಧಿಕಾರಿಗಳು (Department of Archeology) ಕೋಟೆಯ ಹೊರಭಾಗವನ್ನು ಸಂರಕ್ಷಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದ್ದು ಹೋರಾಟಗಾರರು ಆಕ್ರೋಶ ಹೊರಹಾಕ್ತಿದ್ದಾರೆ.ಈ ಕುರಿತು ಒಂದು ವರದಿ ಇಲ್ಲಿದೆ.
ಇದನ್ನೂ ಓದಿ: Vanivilas Reservoir Chitradurga: 60 ವರ್ಷಗಳ ಬಳಿಕ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ