Asianet Suvarna News Asianet Suvarna News

ನೇಮಕ ಮಾಡಿದ್ದ ಸರ್ಕಾರದಿಂದಲೇ ತಡೆ: ಖಡಕ್ ಅಧಿಕಾರಿಗೆ ಬೆದರಿದ್ರಾ ಮಂಡ್ಯ ರಾಜಕೀಯ ನಾಯಕರು?

ಮಂಡ್ಯ ಎಸ್‌ಪಿಯಾಗಿ ಸುಮನ್‌.ಡಿ.ಪನ್ನೇಕರ್‌ ಅಧಿಕಾರ ಸ್ವೀಕರಿಸಬೇಕಿತ್ತು. ಆದ್ರೆ, ಇನ್ನೂ 2 ದಿನ ಅಧಿಕಾರ ವಹಿಸಕೊಳ್ಳದಂತೆ ಸರ್ಕಾರದ ಡಿಪಿಎಆರ್‌ ವಿಭಾಗ ಮೌಖಿಕ ಸೂಚನೆ ನೀಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

First Published Oct 22, 2021, 11:50 AM IST | Last Updated Oct 22, 2021, 11:50 AM IST

ಬೆಂಗಳೂರು, (ಅ.22): ರಾಜ್ಯ ಸರ್ಕಾರ  ಮೊನ್ನೆಯಷ್ಟೇ  9 ಮಂದಿ ಐಪಿಎಸ್‌ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಲಾಗಿತ್ತು. ಅದರಲ್ಲಿ ಮಂಡ್ಯ ಎಸ್‌ಪಿ ಸ್ಥಾನ ಕೂಡಾ ಒಂದು. ಅದರಂತೆ ಮಂಡ್ಯ ಎಸ್‌ಪಿಯಾಗಿ ಸುಮನ್‌.ಡಿ.ಪನ್ನೇಕರ್‌ ಅಧಿಕಾರ ಸ್ವೀಕರಿಸಬೇಕಿತ್ತು.

ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ IAS ಅಧಿಕಾರಿಗಳ ವರ್ಗಾವಣೆ

ಆದ್ರೆ, ಇನ್ನೂ 2 ದಿನ ಅಧಿಕಾರ ವಹಿಸಕೊಳ್ಳದಂತೆ ಸರ್ಕಾರದ ಡಿಪಿಎಆರ್‌ ವಿಭಾಗ ಮೌಖಿಕ ಸೂಚನೆ ನೀಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.ನೇಮಕ ಮಾಡಿದ್ದ ಸರ್ಕಾರವೇ ಈಗ ತಡೆಹಿಡಿದಿದೆ. ಇದ್ರ ಹಿಂದೆ ರಾಜಕೀಯ ನಾಯಕರ ಕೈವಾಡದ ಶಂಕೆ ಹೊಗೆಯಾಡ್ತಿದೆ.