ಹೈಕೋರ್ಟ್‌ಗೆ ಸೂಪರ್‌ಹಿಟ್ 'ಸರ್ಜರಿ' ಫಿಲ್ಮ್ ತೋರಿಸಿದ್ದ ಆರೋಪಿ ದರ್ಶನ್ ಡಿಸ್ಚಾರ್ಜ್.!
ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿದ್ದ ನಟ ದರ್ಶನ್, ಸರ್ಜರಿ ಮಾಡಿಸಿಕೊಳ್ಳದೆ ಡಿಸ್ಚಾರ್ಜ್ ಆಗಿದ್ದಾರೆ. ರೆಗ್ಯುಲರ್ ಬೇಲ್ ಸಿಕ್ಕ ಬಳಿಕ ಫಿಸಿಯೋಥೆರಪಿ ಮೂಲಕ ಗುಣಮುಖರಾಗಿದ್ದಾಗಿ ತಿಳಿಸಿದ್ದಾರೆ.
ಬೆಂಗಳೂರು (ಡಿ.18): ರಾಜ್ಯ ಹೈಕೋರ್ಟ್‌ಗೆ ಒಂದೂವರೆ ತಿಂಗಳ ಕಾಲ ಭರ್ಜರಿಯಾಗಿ ಸರ್ಜರಿ ಫಿಲ್ಮ್ ತೋರಿಸಿದ್ದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ನಟ ದರ್ಶನ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿದ್ದ ನಟ ದರ್ಶನ್, ತನಗೆ ಅಪಾರ ಪ್ರಮಾಣದ ಬೆನ್ನುನೋವಿದ್ದು, ಕೂಡಲೇ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಮಧ್ಯಂತರ ಜಾಮೀನು ಸಿಕ್ಕ ಬಳಿಕವೂ 49 ದಿನಗಳ ಕಾಲ ಆಸ್ಪತ್ರೆಯ ಬೆಡ್ ಮೇಲೆ ಹೊರಳಾಡಿ ಭರ್ಜರಿಯಾಗಿ ಸರ್ಜರಿ ಫಿಲ್ಮ್‌ಅನ್ನು ದರ್ಶನ್ ತೋರಿಸಿದ್ದರು. ಯಾವಾಗ ಹೈಕೋರ್ಟ್ ಈ ಕೇಸ್‌ನಲ್ಲಿ ರೆಗ್ಯುಲರ್ ಬೇಲ್‌ಅನ್ನು ದರ್ಶನ್‌ಗೆ ನೀಡಿತೋ, ಅಂದೇ ದರ್ಶನ್ ತಮಗೆ ಯಾವ ಸರ್ಜರಿ ಕೂಡ ಅಗತ್ಯವಿಲ್ಲ ಎಂದಿದ್ದರು. ಈಗ ಫಿಸಿಯೋಥೆರಪಿ ಮೂಲಕವೇ ನಾನು ಗುಣಮುಖನಾಗಿದ್ದೇನೆ ಎಂದು ದರ್ಶನ್ ಹೇಳಿದ್ದು, ಬುಧವಾರ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ಡಿಸ್ಚಾರ್ಜ್ ಆದ ಬೆನ್ನಲ್ಲಿಯೇ ಪತ್ನಿ ವಿಜಯಲಕ್ಷ್ಮೀ ಅವರ ಕಾರು ಏರಿ ಹೊರಟಿದ್ದಾರೆ.ಕಾರು ಸಂಖ್ಯೆ KA03NT6633 ರೇಂಜ್ ರೋವರ್ ಎವಕ್ ದರ್ಶನ್‌ರನ್ನು ಕರೆದುಕೊಂಡು ಹೋಗಲು ಆಗಮಿಸಿತ್ತು. ಆಸ್ಪತ್ರೆ ಬಳಿಯೇ ಕಾರನ್ನ ಕ್ಲೀನ್ ಮಾಡುತ್ತಿದ್ದರು.ಆಸ್ಪತ್ರೆಯಿಂದ ನೇರ ಹೊಸಕೆರೆಹಳ್ಳಿಯ ಪತ್ನಿ ಫ್ಲಾಟ್‌ಗೆ ದರ್ಶನ್ ತೆರಳಲಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದ.ಕೊನೆಗೂ ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೇವಲ ಫಿಸಿಯೋಥೆರಪಿ ಮಾಡಿಸಿ ಬೇಲ್ ಸಿಗ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸರ್ಜರಿ ಮಾಡಿಸಿಕೊಳ್ಳಲು ನಟ ದರ್ಶನ್‌ಗೆ ಭಯ ಶುರುವಾಗಿತ್ತು. ಹೀಗಾಗಿ ಸರ್ಜರಿ ಮಾಡಿಸಿಕೊಳ್ಳಲು ದರ್ಶನ್ ಹಿಂದೇಟು ಹಾಕಿದ್ದಾನೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಕಳೆದ ಎರಡು ದಿನದ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ದರ್ಶನ್, ಕೋರ್ಟ್ ಗೆ ತೆರಳಿ ಜೈಲ್ ಪ್ರಕ್ರಿಯೆ ಮುಗಿಸಿ ವಾಪಾಸ್ ಆಸ್ಪತ್ರೆಗೆ ಬಂದಿದ್ದ. ಸದ್ಯ ದರ್ಶನ್ ಗೆ ಆಸ್ಪತ್ರೆಯಲ್ಲಿ ವೈದ್ಯರು ಕೌನ್ಸೆಲಿಂಗ್ ಮಾಡಿದ್ದಾರೆ. ಮತ್ತೆ ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಆಸ್ಪತ್ರೆಯಿಂದ ವೈದ್ಯರ ಸಲಹೆ ಮೇರೆಗೆ ಬುಧವಾರ ಬೆಳಿಗ್ಗೆ ಡಿಸ್ಚಾರ್ಜ್ ಆಗಲಿದ್ದಾರೆ. ರೆಗ್ಯೂಲರ್ ಬೇಲ್ ಸಿಕ್ಕ ವಾರದೊಳಗೆ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ.
ನನಗೂ ದರ್ಶನ್ ಅಂಥ ಗಂಡನೇ ಸಿಗ್ಬೇಕು ಎನ್ನೋ ಆಸೆ ತುಂಬಾ ಇತ್ತು: ನಟಿ ಅನಿಕಾ
ದರ್ಶನ್ ಡಿಸ್ಚಾರ್ಜ್ ಆಗುವ ಬೆನ್ನಲ್ಲಿಯೇ ಅವರ ನಿವಾಸಕ್ಕೆ ಅಭಿಮಾನಿಗಳು ಆಗಮಿಸಿದ್ದಾರೆ. ಆರ್.ಆರ್ ನಗರದ ನಿವಾಸದ ಮುಂದೆ ದರ್ಶನ್ ಅಭಿನಯದ ಸಿನಿಮಾ ಡೈಲಾಗ್ಅನ್ನು ಹೇಳುತ್ತಿದ್ದಾರೆ. ಇನ್ನು ದರ್ಶನ್ ಮಹಿಳಾ ಅಭಿಮಾನಿಗಳಿಗೆ ಶಕ್ತಿ ಯೋಜನೆ ಕೂಡ ನೆರವಾಗಿದೆ. ದರ್ಶನ್‌ರನ್ನ ನೋಡಲು ತುಮಕೂರಿನಿಂದ ಮಹಿಳಾ ಅಭಿಮಾನಿಗಳು ಬಂದಿದ್ದಾರೆ. ಆಧಾರ್ ಕಾರ್ಡ್ ಹಿಡಿದು ಸರ್ಕಾರಿ ಬಸ್ ಬಂದಿರುವ ಮಹಿಳಾ ಅಭಿಮಾನಿಗಳು, ದರ್ಶನ್‌ರನ್ನ ನೋಡೋಕೆ ಶಕ್ತಿ ಯೋಜನೆ ತುಂಬಾನೇ ನೆರವಾಯ್ತು ಎಂದಿದ್ದಾರೆ.
ದರ್ಶನ್ ವಿರುದ್ಧ ಸುಪ್ರೀಂ ಮೊರೆ? ನಟನ ಮೇಲೆ ಗೂಂಡಾ ಕಾಯ್ದೆ?